ಬೆಳಗಾವಿ : ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಬೆಳಗಾವಿ ನಗರದ ಕಪಿಲೇಶ್ವರ ಮಂದಿರ ನಾಳೆಯಿಂದ ಭಕ್ತಾದಿಗಳ ದರ್ಶನಕ್ಕೆ ಸಿದ್ಧವಾಗುತ್ತಿದೆ. ದೇಶದಲ್ಲಿ ಕೊರೊನಾ ಅಟ್ಟಹಾಸದಿಂದ ಹಲವಾರು ದಿನಗಗಳಿಂದ ಎಲ್ಲ ದೇವಾಲಯಗಳಲ್ಲಿ ಭಕ್ತರನ್ನು ನಿರ್ಬಂಧಿಸಲಾಗಿತ್ತು. ಈಗ ನಾಳೆಯಿಂದ ರಾಜ್ಯದಲ್ಲಿ ಕೆಲವು ಬಿಟ್ಟು ಎಲ್ಲಾ ದೇವಾಲಯಗಳು ಪುನಾರಂಭವಾಗುತಿದೆ. ಜಿಲ್ಲೆಯ ಪುರಾತನ ದೇವಾಸ್ಥಾನಗಳಲ್ಲಿ ಒಂದಾದ ದಕ್ಷಿಣದ ಕಾಶಿ ಕಪಿಲೇಶ್ವರ ದೇವಸ್ಥಾನ ಸ್ವಚ್ಛಗೊಳಿಸಿ, ಮಂದಿರಕ್ಕೆ ತಳಿರು ತೋರಣ ಕಟ್ಟಿ ಭರ್ಜರಿ ಸಿದ್ದತೆ ಮಾಡಿ ಇಂದು ಮಧ್ಯಾಹ್ನ ಅರ್ಚಕರು ಹೋಮ್ ಹವನ ಮಾಡಿದದ್ದು ಇಂದಿನಿಂದಲೇ ದೇವಸ್ಥಾನದ ಆಡಳಿತ ಮಂಡಳಿಯು ದೇಗುಲದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದು ಭಕ್ತರು ಆ ಶಿವನ ಅನುಗ್ರಹಕ್ಕಾಗಿ ಸಕಲ ಸಿದ್ಧತೆ ಮಾಡಿದ್ದಾರೆ.