ನನ್ನ ಕ್ಷೇತ್ರದಲ್ಲಿ ಯಾರೂ ಮನೆಯಿಲ್ಲದೇ ಸಂಕಟ ಅನುಭವಿಸಬಾರದು, ಶಶಿಕಲಾ ಜೊಲ್ಲೆ

ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಸುಮಾರು 133.60 ಲಕ್ಷ ಕೋಟಿ ರೂ. ಗಳ ಮೊತ್ತದಲ್ಲಿ 2052 (ಜಿ+2) ಮನೆಗಳ ನಿರ್ಮಾಣ ಕಾಮಗಾರಿಗಳಿಗೆ ವಸತಿ ಸಚಿವರಾದ ವಿ.ಸೋಮಣ್ಣ ಭೂಮಿ ಪೂಜೆ ನೆರವೇರಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ನನ್ನ ಕ್ಷೇತ್ರದಲ್ಲಿ

promotions
logintomyvoice

ಯಾರೂ ಮನೆಯಿಲ್ಲದೇ ಸಂಕಟ ಅನುಭವಿಸಬಾರದು ಎಂಬುದು ನನ್ನ ಮಹತ್ವಕಾಂಕ್ಷೆಯ ಉದ್ದೇಶದಿಂದ ಪ್ರತಿ ಬಡಕುಟುಂಬಕ್ಕೂ ಸೂರು ನಿರ್ಮಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ನಾನು ಪಟ್ಟ ಸತತ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಬಡ ಬಂಧುಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲು ನಾನು ಎಂದೆಂದಿಗೂ ಶತಸಿದ್ಧನಾಗಿರುತ್ತೇನೆ ಎಂದು ಸಚಿವೆ ಜೊಲ್ಲೆ ಹೇಳಿದರು.

promotions

Read More Articles