ನೂತನ ಅಧ್ಯಕ್ಷರಾಗಿ ರಮೇಶ ಕತ್ತಿ ಏನು ಹೇಳಿದರು ಗೊತ್ತಾ...?
- 14 Jan 2024 , 11:30 PM
- Belagavi
- 178
ಬೆಳಗಾವಿ: ಸಾಕಷ್ಟು ಜಿದ್ದಾಜಿದ್ದನ ನಡುವೆ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟಕ್ಕೆ ತೆರೆ ಬಿದ್ದಿದೆ. ಅಧ್ಯಕ್ಷರಾಗಿ ರಮೇಶ ಕತ್ತಿ, ಉಪಾಧ್ಯಕ್ಷರಾಗಿ ಸುಭಾಷ ಢವಳೇಶ್ವರ ಅವರೇ ಮುಂದುವರಿದಿದ್ದಾರೆ. ಅಧ್ಯಕ್ಷರಾಗಿ ಆಯ್ಕೆ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಮೇಶ ಕತ್ತಿ, ಈ ಬ್ಯಾಂಕಿಗೆ ಕಳೆದ ಸುಮಾರು ವರ್ಷದಿಂದ ಸೇವೆ ಮಾಡಿದ್ದೇನೆ.


ಈ ಐದು ವರ್ಷ ಮುಗಿಸಿದರೆ 44 ವರ್ಷ ಸೇವೆ ಮಾಡಿದ ಹೆಮ್ಮೆ ನನಗಿದೆ. ಈ ಸಲ ಪಕ್ಷ ಹಾಗೂ ಸಂಘಟನೆಯ ಮಾರ್ಗದರ್ಶನದಲ್ಲಿ ಮತ್ತೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೇನೆ. ಕಳೆದ ಬಾರಿ ಈ ಸ್ಥಾನದಿಂದ ನಮ್ಮಲ್ಲಿ ಸ್ವಲ್ಪ ಗೊಂದಲ ನಿರ್ಮಾಣವಾಗಿತ್ತು ಅದನ್ನೆಲ್ಲವನ್ನು ಮೆಲಕು ಹಾಕಿ ಪಕ್ಷ ಮತ್ತು ಸಂಘಟನೆಯ ಮಾರ್ಗದರ್ಶನದಲ್ಲಿ ನಾವೆಲ್ಲ ಕೂಡಿ ತಿದ್ದಿಕೊಂಡು ಎಲ್ಲರ ಸಮ್ಮತದಿಂದ ಒಂದಾಗಿದ್ದೇವೆ ಎಂದರು. ಡಿಸಿಸಿ ಬ್ಯಾಂಕ್ ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯ ಮುಖಾಂತರ ಹೆಚ್ಚಿನ ಕೊಡುಗೆಯನ್ನು ಕೊಡುತ್ತೇವೆ.

40 ಲಕ್ಷ. ಜನರಿಗೆ ಸೇವೆ ಸಲ್ಲಿಸುತ್ತಿರುವ ನಾವು ಮುಂದಿನ ದಿನಗಳಲ್ಲಿ 60 ಲಕ್ಷ. ಜನರಿಗೆ ಸೇವೆ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು. ಶಾಸಕ ಉಮೇಶ್ ಕತ್ತಿ ಡೈಮಂಡ್ ಇದ್ದಂತೆ. ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಸಹೋದರ ಉಮೇಶ್ ಕತ್ತಿಗೆ ಮಂತ್ರಿ ಸ್ಥಾನ ನೀಡುವ ಆತ್ಮವಿಶ್ವಾಸ ನನಗಿದೆ.
ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ನಾನು ಆಕಾಂಕ್ಷಿಯಲ್ಲ ಅಂಗಡಿ ಕುಟುಂದವರಿಗೆ ಆ ಸ್ಥಾನ ಕೊಡಿ ಎಂದು ಹೇಳಿದ್ದೇನೆ. ಒಂದು ವೇಳೆ ಪಕ್ಷ ಬೇರೆ ತೀರ್ಮಾನಕ್ಕೆ ಬಂದರೆ ಆವಾಗ ನಾನು ಬಗ್ಗೆ ತಿಳಿಸುತ್ತೇನೆ ಎಂದು ಹೇಳುವ ಮೂಲಕ ತೆರೆ ಎಳೆದರು.










