ಸೈನಿಕರ ಜೋತೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

ರಾಜಸ್ಥಾನ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಾರಿಯೂ ಭಾರತೀಯ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು ದೀಪಾವಳಿ ಆಚರಿಸಲು ರಾಜಸ್ಥಾನದ ಜೈಸಲ್‌ಮೇರ್‌ಗೆ ಬಹು ಸಡಗರ ದಿಂದ ಆಚರಿಸಲಾಯಿತು.

promotions
logintomyvoice

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು 2014 ರಲ್ಲಿ ದೀಪಾವಳಿಯ ಸಿಯಾಚಿನಗೆ ಹೋದಾಗ, ಕೆಲವರು ಆಶ್ಚರ್ಯಗೋಳಗಾಗಿದ್ದರು . ನಾನು ನನ್ನ ಜನರ ನಡುವೆ ಬರುತ್ತೇನೆ, ನನ್ನ ಜನರನ್ನು ಬಿಟ್ಟು ನಾನೆಲ್ಲಿ ಹೋಗಲಿ ? ನೀವು ಹಿಮಭರಿತ ಬೆಟ್ಟಗಳಲ್ಲಿ ಅಥವಾ ಮರುಭೂಮಿಯಲ್ಲಿ ವಾಸಿಸುತ್ತಿರಲಿ, ನನ್ನ ದೀಪಾವಳಿ ನಿಮ್ಮ ನಡುವೆ ಬರುವ ಮೂಲಕ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.

promotions

ಪರಿಸ್ಥಿತಿ ಏನೇ ಇರಲಿ, ನಿಮ್ಮ ಶಕ್ತಿ ಮತ್ತು ಶೌರ್ಯವನ್ನು ಎಲ್ಲಿಯೂ ಹೋಲಿಸಲಾಗದು. 130 ಕೋಟಿ ದೇಶವಾಸಿಗಳು ನಿಮ್ಮ ಶೌರ್ಯಕ್ಕೆ ತಲೆಬಾಗುತ್ತಾ ನಿಮ್ಮೊಂದಿಗೆ ದೃಡ ವಾಗಿ ನಿಂತಿದ್ದಾರೆ. ನಿಮ್ಮ ಶೌರ್ಯದ ಬಗ್ಗೆ ಹೆಮ್ಮೆ ಪಡುತ್ತಾರೆ.

ವಿಶ್ವದ ಯಾವುದೇ ಶಕ್ತಿಯು ನಮ್ಮ ಧೈರ್ಯಶಾಲಿ ಸೈನಿಕರು ದೇಶದ ಗಡಿ ರಕ್ಷಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೆಮ್ಮೆ ಪಟ್ಟರು .

ಗಡಿಯಲ್ಲಿ ನೀವು ಮಾಡುವ ತ್ಯಾಗ, ತಪಸ್ಸು ದೇಶದ ಜನರಲ್ಲಿ ನಂಬಿಕೆ ಹುಟ್ಟುಹಾಕುತ್ತದೆ.ಮಿಲಿಟರಿ ಕೌಶಲ್ಯದ ಇತಿಹಾಸವನ್ನು ತೆಗೆದು ಓದಿದಾಗಲೆಲ್ಲಾ ಲಾಂಗ್‌ವಾಲಾ ಕದನ ನೆನಪಾಗುತ್ತದೆ ಇಂದಿಗೂ ಪ್ರತಿಯೊಬ್ಬ ಭಾರತೀಯರ ಹೃದಯವನ್ನು ತುಂಬುತ್ತದೆ ಎಂದು ನೆನೆದರು.

ಪ್ರತಿ ಬಾರಿಯೂ, ಪ್ರತಿ ಹಬ್ಬದಲ್ಲೂ, ನಾನು ನಿಮ್ಮ ನಡುವೆ ಬಂದಾಗಲೆಲ್ಲಾ, ನಾನು ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯುತ್ತೇನೆ,ನಿಮ್ಮ ಸಂತೋಷ ಮತ್ತು ದುಃಖದಲ್ಲಿ ನಾನು ಹೆಚ್ಚು ತೊಡಗಿಸಿಕೊಳ್ಳುತ್ತೇನೆ.

ಸಾಮರ್ಥ್ಯವು ವಿಜಯದ ನಂಬಿಕೆ, ದಕ್ಷತೆಯು ಶಾಂತಿಯ ಬಹುಮಾನವಾಗಿದೆ. ಭಾರತ ಇಂದು ಸುರಕ್ಷಿತವಾಗಿದೆ, ಏಕೆಂದರೆ ಭಾರತಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿ ಇದೆ. ಎಂದು ಪ್ರಧಾನಿ ಮೋದಿಯವರು ಭಾರತದ ಘನತೆಯನ್ನು ಕುರಿತು ದೇಶಕ್ಕೆ ತಿಳಿಸಿದರು.

ಈ ಸಂದರ್ಭದಲ್ಲಿಅವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ , ಬಿಎಸ್‌ಎಫ್‌ ಮಹಾ ನಿರ್ದೇಶಕ ರಾಕೇಶ್ ಅಸ್ಥಾನಾ ಹಾಗೂ ಇತರು ಉಪಸ್ಥಿತರಿದ್ದರು.

Read More Articles