ಹಬ್ಬದ ಪ್ರಯುಕ್ತ ಗ್ರಾಮೀಣ ಯುವಕರಿಗಾಗಿ ಓಟದ ಸ್ಪರ್ಧೆ

ಕಿತ್ತೂರು: ತಾಲೂಕಿನ ಕಾದರವಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಚನ್ನಬವೇಶ್ವರ ಗೆಳೆಯರ ಬಳಗದ ವತಿಯಿಂದ ಬಸವರಾಜ ಹೈಬತ್ತಿ (ನಿವೃತ್ತಿ ಸೈನಿಕರು) ನೇತೃತ್ವದಲ್ಲಿ ಗ್ರಾಮೀಣ ಯುವಕರಿಗಾಗಿ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ರವಿವಾರ ದಿ.15 ರಂದು ನಡೆದ 1,3,5 ಕಿ.ಮಿ ಓಟದ ಸ್ಪರ್ಧೆಯಲ್ಲಿ ಬೇರೆ ಬೇರೆ ಗ್ರಾಮಗಳಿಂದ 100 ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಮೇಜರ್ ಡಾ. ಮೋಹನ್ ಅಂಗಡಿ ಮಾತನಾಡಿ, ಭಾರತೀಯ ಸೇನೆಯಲ್ಲಿ ಹೆಚ್ಚು ಹೆಚ್ಚು ಯುವಕರು ಸೇರ್ಪಡೆಯಾಗಿ ಒಳ್ಳೆಯ ಹುದ್ದೆಯನ್ನು ಅಲಂಕರಿಸಿ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸಿದರು. ರಾಜು ಹೈಬಿತ್ತಿ ಮಾತನಾಡಿ, ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವುದು, ಅವರಿಗೆ ಪ್ರೋತ್ಸಾಹಿಸುವುದರ ಜೊತೆಗೆ ಅವರನ್ನು ಬೆಳೆಸುವಂತ ಕಾರ್ಯಕ್ರಮ ಇದಾಗಿದೆ ಎಂದರು. ನಂತರ ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಕಲ್ಮೇಶ ಹೈಬತ್ತಿ, ಬಸವರಾಜ ಹುಲ್ಲೂರ, ಶಿವಾನಂದ ಮಾರಿಹಾಳ, ರುದ್ರಪ್ಪ ಕೇದಾರಿ, ಶಂಕರ ಇಂಚಲ, ಸಣ್ಣಪ್ಪ ರಾಮರಾವ್, ಕೆಂಪೇಶ ಕುಂಬಾರ, ಮುದುಕಪ್ಪ ದಿಬ್ಬದ, ಅಪ್ಪಯ್ಯ ಮಾರಿಹಾಳ, ರುದ್ರಪ್ಪ ಹೈಬತ್ತಿ ಹಾಗೂ ಇತರರು ಉಪಸ್ಥಿತರಿದ್ದರು.

promotions

promotions

Read More Articles