ಮಹಾರಾಷ್ಟ್ರ ಡಿಸಿಎಂ ಅಜೀತ್ ಪವಾರ್ ಹೇಳಿಕೆ ತಿರುಗೇಟು ನೀಡಿದ ಸಚಿವೆ ಶಶಿಕಲಾ ಜೋಲ್ಲೆ

ನಿಪ್ಪಾಣಿ: ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದಿದ್ದ ಮಹಾರಾಷ್ಟ್ರ ರಾಜ್ಯದ ಡಿಸಿಎಂ ಅಜೀತ್ ಪವಾರ್ ಹೇಳಿಕೆ ಕುರಿತು ಪಟ್ಟಣದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೋಲ್ಲೆ, ಕರ್ನಾಟಕ ಯಾರ ಸ್ವತ್ತಲ್ಲ, ಭಾಷಾವಾರು ಪ್ರಾಂತ್ಯ ಆದಾಗ ವಿಂಗಡಣೆ ಆಗಿದೆ.

promotions

ಅದಲ್ಲದೆ ಈಗಾಗಲೇ ಸುಪ್ರೀಂಕೋರ್ಟ್ ಅಲ್ಲಿ ಇದರ ಕುರಿತು ಕೇಸ್ ಕೂಡಾ ನಡಿತಾ ಇದೆ ಇಂತಹ ಸಮಯದಲ್ಲಿ ಈ ರೀತಿ ಹೇಳಿಕೆ ನೀಡುವುದು ತಪ್ಪು, ಕರ್ನಾಟಕದವರಾದ ನಾವು ನಮ್ಮ ಅಖಂಡ ಕನ್ನಡ ನಾಡನ್ನು ಬಿಟ್ಟು ಕೊಡಲು ಸಿದ್ಧರಿಲ್ಲ, ಇಂಥವರ ಹೇಳಿಕೆಗೆ ನಮ್ಮ ನಮ್ಮಲ್ಲಿ ಜಗಳವಾಡದೆ, ಕನ್ನಡಿಗರೆಲ್ಲರೂ ಒಗ್ಗಟ್ಟಾಗಿ ಇದ್ದುಕೊಂಡು ನಮ್ಮ ಕರ್ನಾಟಕವನ್ನು ರಕ್ಷಣೆ ಮಾಡಲು ನಾವೆಲ್ಲರೂ ಸಿದ್ಧರಾಗಿದ್ದೇವೆ ಎಂದರು.

promotions

Read More Articles