ಹಾಲುಮತ ಸಮುದಾಯದ ಬಾಂಧವರು ಹಾಲಿನಂತ ಮನಸ್ಸಿನವರು; ರೋಹಿನಿ ಪಾಟೀಲ್

ಬೆಳಗಾವಿ: ಹಾಲುಮತ ಸಮುದಾಯದ ಬಾಂಧವರು ಹಾಲಿನಂತ ಮನಸ್ಸಿನವರು ಹಾಗೂ ನಾಡಿಗೆ ಅವರ ಕೊಡುಗೆ ಅಪಾರವಾದದ್ದು, ರೇವಣಸಿದ್ದ ಹಾಗೂ ರೇಣುಕಾಚಾರ್ಯರ ಬಾಂಧವ್ಯ ಅನನ್ಯವಾದದ್ದು ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಸದಸ್ಯೆ ರೋಹಿನಿ ಪಾಟೀಲ್ ಹೇಳಿದರು. ಇಲ್ಲಿಯ ಶ್ರೀ ಭೀರಸಿದ್ಧೇಶ್ವರ ದೇವಾಲಯದ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ ಹಾಗು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯ ಅಡಿಗಲ್ಲು ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಮಹಾಂತೇಶ ದೊಡಗೌಡರ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸರಕಾರದ ಅನುದಾನ ಕೊಡಿಸುವ ಭರವಸೆ ನೀಡಿದರು.

promotions

ಹು.ದಾ.ಮಹಾನಗರ ಪಾಲಿಕೆಯ ಸದಸ್ಯ ಶಿವಾನಂದ ಮುತ್ತೆನ್ನವರ ಮಾತನಾಡಿ ಕಿತ್ತೂರ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ನಂತಹ ವೀರರು ಜನಿಸಿದ ಪುಣ್ಯ ಭೂಮಿಯಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿ ದೇವಾಲಯ ನಿರ್ಮಾಣಕ್ಕೆ ಬೇಕಾದ ಸಹಾಯ ಸಹಕಾರ ನೀಡುತ್ತೇವೆ ಹಾಗೂ ಇಲ್ಲಿಯ ಜನಪ್ರತಿನಿಧಿಗಳು ಆದಷ್ಟು ಹೆಚ್ಚಿನ ಪ್ರಮಾಣದ ಧನ ಸಹಾಯವನ್ನು ಸರಕಾರದ ಅನುದಾನದಿಂದ ಕೊಡಿಸಬೇಕು ಎಂದು ಒತ್ತಾಯಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರು ಹಾಗೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರ ಚನ್ನಮ್ಮನ ಹೆಸರಿಡಬೇಕೆಂದು ಸರಕಾರಕ್ಕೆ ಆಗ್ರಹಿಸಿದರು. ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮಾರುತಿ ಮರಡಿ ಮಾತನಾಡಿ ಸಂಗೊಳ್ಳಿ ರಾಯಣ್ಣನಂತ ದೇಶ ಭಕ್ತಿಯನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು ಅಂತಹ ಮಹಾನ ನಾಯಕರು ನಮಗೆಲ್ಲಾ ಸ್ಪೂರ್ತಿದಾಯಕವಾಗಿದ್ದಾರೆ ಎಂದರು. ಬೈಲಹೊಂಗಲದ ಮೂರುಸಾವಿರ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು ಮನಸೂರಿನ ಡಾ. ಶ್ರೀ ಬಸವರಾಜ ದೇವರು, ಶ್ರೀ ಸಚ್ಚಿದಾನಂದ ಅವದೂತರು ಆಶಿರ್ವಚನ ನೀಡಿದರು ಹಾಗೂ ಶ್ರೀ ಅಕ್ಕನಾಗಲಾಂಭಿಕಾ ದೇವಸ್ಥಾನದ ಶ್ರಿ ಬಸವರಾಜ ಸಾದು ಮಹಾರಾಜರು ಹಂದಿಗುಂದದ ಶ್ರೀಮಂತ ಸದ್ಗುರು ಮಹಾರಾಜರು ತಪಸಿಯ ಶ್ರೀ ಸುರೇಶ ಮಹಾರಾಜರು ವೇದಮೂರ್ತಿ ರುದ್ರಯ್ಯ ಸ್ವಾಮಿಗಳು ಉಪಸ್ಥಿತರಿದ್ದರು.

promotions

ಕಾರ್ಯಕ್ರಮದ ನಿಮಿತ್ಯ ಗ್ರಾಮದಲ್ಲಿ ಸಡಗರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು ಸ್ವಾಮಿಜಿಗಳನ್ನು ಹಾಗು ಗಣ್ಯರನ್ನು ಡೊಳ್ಳಿನ ವಾದ್ಯ ಮೇಳಗಳೊಂದಿಗೆ ಸ್ವಾಗತಿಸಲಾಯಿತು. ಊರಿನ ಹಿರಿಯರಾದ ಭೀರಪ್ಪಾ ದೇಶನೂರ ಬಾಬು ಚಂದರಗಿ ಸದೇಪ್ಪಾ ವನ್ನೂರ, ಸರದಾರ ಗೊಡಚಿ, ಉದ್ದಪ್ಪಾ ಗೊಡಚಿ, ಉದ್ದಪ್ಪಾ ಕುರಿ, ಯಲ್ಲಪ್ಪಾ ವಿಭೂತಿ ಪ್ರಭು ವಿಭೂತಿ ಕರಬಸಪ್ಪಾ ಚಿನ್ನಪ್ಪಗೌಡರ ಗೌಡಪ್ಪಾ ಪಾಟೀಲ ನಾಗಪ್ಪಾ ಹುಣಸಿಬೀಜ ಕಲ್ಲಪ್ಪಾ ಕುರಗುಂದ ಪ್ರಮುಖರು ಪೂಜ್ಯ ಸ್ವಾಮಿಜಿಗಳವರನ್ನು ಹಾಗೂ ಗಣ್ಯರನ್ನು ಸತ್ಕರಿಸಿದರು ಶಿಕ್ಷಕರಾದ ಗುರುಸಿದ್ದಪ್ಪಾ ಸತ್ತೆನ್ನವರ ಸ್ವಾಗತಿಸಿದರು ಉಮೇಶ ಚಿನ್ನಪ್ಪಗೌಡರ ಗ್ರಾಮದ ಇತಿಹಾಸವನ್ನುಪ್ರಾಸ್ತಾವಿಕವಾಗಿ ವಿವರಿಸಿದರು.ರಮೇಶ ಗೊಣಿ ಪ್ರೊ ಆರ್ ಡಿ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಜಿ ಪಂ ಸದಸ್ಯರು ಹಾಗೂ ಡಿ ಸಿ ಸಿ ಬ್ಯಾಂಕ ನಿರ್ದೇಶಕರಾದ ಕೃಷ್ಣಾ ಅನಗೊಳಕರ, ನಾಸಿರ ಬಾಗವಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More Articles