ಕುಡಿಯುವ ನೀರಿಗೆ ಆಗ್ರಹಿಸಿ ಪಾಶ್ಚಾಪೂರದಲ್ಲಿಂದು ಪ್ರತಿಭಟನೆ
- 15 Jan 2024 , 1:29 AM
- Belagavi
- 110
ಹುಕ್ಕೇರಿ: ತಾಲೂಕಿನ ಯಮಕನಮರ್ಡಿ ಮತಕ್ಷೇತ್ರದ ಪಾಶ್ಚಾಪೂರ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಗ್ರಾಮಸ್ಥರು ಇಂದು ಬೀದಿಗೆ ಬಂದು ಹೋರಾಟ ನಡೆಸಿದರು. ಇಂದು ಬೆಳಿಗ್ಗೆ ಪಾಶ್ಚಾಪೂರದ ಅಶೋಕ ವೃತ್ತದ ಬಳಿ ನೂರಾರು ಜನ ಮಹಿಳೆಯರು ಮಕ್ಕಳೊಂದಿಗೆ ಬೀದಿಗೆ ಬಂದ ಜನ ಬಸ್ ನಿಲ್ದಾಣ ಬಳಿ ಮಾನವ ಸರಪಳಿ ನಿರ್ಮಿಸಿ ಕೇಲ ಕಾಲ ರಸ್ತೆ ಬಂದ ಮಾಡಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತ ಮಹಿಳೆಯರು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತೆವೆ 15 ದಿನಗಳಿಗೆ ಒಮ್ಮೆ ನೀರು ಬರುತ್ತದೆ ಇದರಿಂದ ನಮಗೆ ತೊಂದರೆಯಾಗುತ್ತಿದೆ ಮಕ್ಕಳು ವೃದ್ಧರು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಬಂದಿದೆ ನಮಗೆ ನೀರು ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರು ಬಸ್ ನಿಲ್ದಾಣದಿಂದ ಪೇಟೆ ಮಾರ್ಗವಾಗಿ ಗ್ರಾಮಪಂಚಾಯತಗೆ ತೆರಳಿ ಗ್ರಾಮ ಪಂಚಾಯತಿ ಕಾರ್ಯಲಯಕ್ಕೆ ಬೀಗ ಹಾಕಿ ಪಿ ಡಿ ಓ ಯನ್ನು ತರಾಟೆಗೆ ತಗೆದುಕೊಂಡರು. ಗ್ರಾಮದ ಬಲಬದಿ ಮಾರ್ಕಂಡೇಯ ನದಿ ಹರಿಯುತ್ತದೆ ಎಡಬದಿ ಘಟಪ್ರಭಾ ನದಿ ಹರಿಯುತ್ತದೆ ಅಲ್ಲದೆ ಕೇವಲ ಐದು ಕೀಲೋ ಮೀಟರ ಅಂತರದಲ್ಲಿ ರಾಜಾ ಲಕಮಗೌಡಾ ಜಲಾಶಯವಿದೆ ಆದರೆ ಪಾಶ್ಚಾಪೂರ ಗ್ರಾಮಕ್ಕೆ ಶಾಶ್ವತವಾದ ಕುಡಿಯುವ ನೀರುನ ಬವಣೆ ಹತ್ತಾರು ವರ್ಷಗಳಿಂದ ಇದೆ ಎಂದರೆ ಆಶ್ಚರ್ಯಕರ ಸಂಗತಿಯಾಗಿದೆ. ಪ್ರತಿಭಟನಾ ನಿರತ ಮಹಿಳೆಯರು ಗ್ರಾಮ ಪಂಚಾಯತಿ ಕಛೇರಿಗೆ ಬೀಗ ಜಡಿದು ಖಾಲಿ ಕೋಡ ಪ್ರದರ್ಶಿಸಿ ತಮ್ಮ ಆಕ್ರೋಶ ವನ್ನು ಹೋರ ಹಾಕಿದರು. ಇದೆ ರೀತಿ ಮುಂದುವರೆದರೆ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸಲಾಗುವದು ಎಂದು ಎಚ್ಚರಿಕೆ ನೀಡಿದರು. ಬಾಷಾ ಫನಿಬಂದ, ಪರಶುರಾಮ ಬಸನಾಯ್ಕ, ಬಸ್ಸು ಉದೋಶಿ, ಮಹೇಶ ಹೂಗಾರ, ಸಲಿಂ ಮೋಘಲ ನಬಿ ಮುಜಾವರ, ಬಸ್ಸು ಗುಬಚಿ, ಬಾಷಾ ಮುಲ್ಲಾ, ಮಹಾದೇವಿ ಸಿಡ್ಲಿಹಾಳ, ಪಾರ್ವತಿ ಸಿಡ್ಲಿಹಾಳ, ಶಾಂತಾ ಸಿಡ್ಲಿಹಾಳ, ಜರಿನಾ ದರ್ಗಾ, ಇಮಾಮಬು ನದಾಫ್, ಆಯಿಷಾ ಮೋಮಿನ, ನಬಿಸಾಬ ಲಂಗೋಟಿ, ದಸ್ತಗಿರ ಪಾಟೀಲ, ಸುರೈಯಾ ಅತ್ತಾರ, ಶಂಕರ ಮಡಿವಾಳ, ಗಣಪತಿ ಕಾಕಡೆ, ಬಸವರಾಜ ಶಿಂದೆ, ಮೊದಲಾದವರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.












