ಬಿ.ಎಲ್. ಸಂತೋಷ ಹಾಗೂ ರಮೇಶ ಜಾರಕಿಹೊಳಿ‌ ಭೇಟಿ ಒಂದು ಸೌಜನ್ಯದ ಭೇಟಿ; ಸಚಿವ ಡಾ. ಕೆ. ಸುಧಾಕರ

ಬೆಳಗಾವಿ: ಸಚಿವ ರಮೇಶ ಜಾರಕಿಹೊಳಿ‌ ದೆಹಲಿ ಭೇಟಿ ನೀಡಿದ್ದು ಹೊಸದೇನಲ್ಲ ಅದು ಸಾಮಾನ್ಯವಾಗಿದೆ. ಅವರು ನೀರಾವರಿ ಮಂತ್ರಿಯಿದ್ದಾರೆ ನೀರಾವರಿ ಇಲಾಖೆಗೆ ಸಂಬಂಧಿಸಿದ ಕೆಲಸ ಇರುತ್ತೆ ಅದಕ್ಕಾಗಿ ದೆಹಲಿಗೆ ಹೋಗಿ ಭೇಟಿ ಮಾಡ್ತಾರೆ ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಹೇಳಿದರು. ನಗರದ ಸಾಮ್ರಾ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಬಿ.ಎಲ್ .ಸಂತೋಷ ಹಾಗೂ ರಮೇಶ ಜಾರಕಿಹೊಳಿ‌ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ಸಂತೋಷಜೀ ನಮ್ಮ ಪಕ್ಷ ಹಿರಿಯ ನಾಯಕರು, ಸಂಘಟನಾ ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿದ್ರೆ ತಪ್ಪೇನು ಅದು ಒಂದು ಸೌಜನ್ಯದ ಭೇಟಿ ಎಂದರು. ಇನ್ನೂ ಕೊರೋನಾ ಲಸಿಕೆ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಹಲವಾರು ಕಡೆ ಕೊರೋನಾ ಲಸಿಕೆ ಸಿದ್ಧತೆ ನಡೆದಿದೆ. ಇನ್ನು ಬಿಡುಗಡೆ ಆಗಿಲ್ಲ ಯಾವಾಗ ಪೂರ್ಣ ಪ್ರಮಾಣದಲ್ಲಿ ಸಿದ್ಧತೆ ಆಗಿದೆ ಎಂದು ಘೋಷಣೆ ಮಾಡುತ್ತಾರೆ ಆವಾಗ ಖಂಡಿತವಾಗಿ ದೇಶದಲ್ಲಿ ದೊಡ್ಡಪ್ರಮಾನದಲ್ಲಿ ಲಸಿಕೆ ಸಿಗುವ ವ್ಯವಸ್ಥೆ ಆಗುತ್ತೆ ಎಂದರು.

promotions

promotions

Read More Articles