ಬಿಜೆಪಿ ಯಮಕನಮರಡಿ ಮಂಡಳದ ಪ್ರಶಿಕ್ಷಣ ವರ್ಗದ ತರಬೇತಿ ಮುಕ್ತಾಯ

ಹುಕ್ಕೇರಿ: ಭಾರತೀಯ ಜನತಾ ಪಕ್ಷ ಯಮಕನಮರಡಿ ಮಂಡಳದ ವತಿಯಿಂದ ಭೂತರಾಮನಹಟ್ಟಿಯ ಮುಕ್ತಿಮಠದಲ್ಲಿ ಬಿಜೆಪಿ ಯಮಕನಮರಡಿ ಮಂಡಳ ಪ್ರಶಿಕ್ಷಣ ವರ್ಗದ ತರಬೇತಿಯು ದಿ 21,22 ರಂದು ಎರಡು ದಿನಗಳ ಕಾಲ ನಡೆಯಿತು. ಎರಡನೇ ದಿನದ ಮೂರನೇ ಅವಧಿಯ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ವಹಿಸಿ ಕೇಂದ್ರ ಸರ್ಕಾರದ ಯೋಜನೆಗಳಾದ ಆತ್ಮನಿರ್ಭರ ಭಾರತ, ಒಂದು ದೇಶ ಒಂದು ರೇಷನಕಾರ್ಡ, ಜನೌಷದಿ, ಕಿಸಾನ ಸಮ್ಮಾನ ಯೋಜನೆಗಳು ಹಾಗೂ ಇನ್ನೀತರ ಯೋಜನೆಗಳ ಕುರಿತು ಹೇಳಿದರು. ಈ ಅವಧಿಯಲ್ಲಿ ರಮೇಶ ಘಂಟೆಯವರು ರಾಜ್ಯ ಸರ್ಕಾರದ ಸಾಧನೆಗಳ ಕುರಿತು ವಿಷಯ ಮಂಡಿಸಿದರು. ರಾಜು ಚಿಕ್ಕಣಗೌಡರ ಶ್ರೀಕಾಂತ ಕುಲಕರ್ಣಿ ಅಮೃತ ಕುಲಕರ್ಣಿ ಇವರು ಪ್ರಶಿಕ್ಷಣ ವರ್ಗದ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ರಾಜೇಶ ನೇರ್ಲಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕಲಗೌಡ ಪಾಟೀಲ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್.ಟಿ. ಮೊರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಶಶಿಕಾಂತ ಮಠಪತಿ, ಯಮಕನಮರಡಿ ಬಿಜೆಪಿ ಉತ್ತರ ಮಂಡಳ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ದಕ್ಷಿಣ ಮಂಡಳ ಅಧ್ಯಕ್ಷ ಅಪ್ಪಯ್ಯ ಜಾಜರಿ, ಈರಣ್ಣಾ ಗುರವ, ಮಾರುತಿ ಅಷ್ಟಗಿ, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

promotions

promotions

Read More Articles