ಕೊರೊನಾ ಆಯ್ತು, ಮುಂದೆ ಗಾಳಿಯಿಂದ ಮತ್ತೊಂದು ರೋಗ ಬರಲಿದೆ; ಕೋಡಿ ಶ್ರೀ ಭವಿಷ್ಯ

ದಾವಣಗೆರೆ: ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾದಿಂದಾಗಿ ದೇಶದ ಜನತೆ ಬೇಸತ್ತು ಹೋಗಿದ್ದಾರೆ. ಅಂತದ್ರಲ್ಲಿ ಮುಂದೆ ಗಾಳಿಯಿಂದ ಮತ್ತೊಂದು ರೋಗ ಬರಲಿದೆ ಎಂದು ಹಾಸನ ಜಿಲ್ಲೆಯ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

promotions
logintomyvoice

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಹೊಸ ರೋಗ ಅಲ್ಲ. ಅದು ಹಳೇ ರೋಗ ಮೊದಲು ಗಂಟಲು ರೋಗ ಎಂದು ಬರುತ್ತಿತ್ತು. ಈಗ ಕೊರೊನಾ ಎಂದು ಹೆಸರು ಬಂದಿದೆ. ಮನುಷ್ಯ ಸ್ವಚ್ಛತೆ ಮರೆತ ಹಿನ್ನಲೆಯಲ್ಲಿ ಈ ರೋಗ ಹೆಚ್ಚಾಗಿದ್ದು. ಇದರ ಪರಿಣಾಮ ಇಷ್ಟಕ್ಕೆ ಮುಗಿಯದೆ ಆಷಾಢ ಮತ್ತು ಕಾರ್ತೀಕ ಮಾಸದಲ್ಲಿ ದೇಶದ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶ್ರೀಗಳು ಭವಿಷ್ಯ ನುಡಿದರು.

promotions
logintomyvoice

ಯಾವುದೇ ಯುದ್ಧಗಳಿಲ್ಲದೆ ಸಮಾಜ ಸರ್ವನಾಶವಾಗುವ ಕಲಿಗಾಲವಿದು ಮುಂದಿನ ದಿನಗಳಲ್ಲಿ ದೇಶ ಹಾಗೂ ರಾಜ್ಯ ರಾಜಕೀಯದಲ್ಲಿ ವಿಷ್ಣವ ಆಗಲಿದೆ. ರಾಜಕೀಯ ಬದಲಾವಣೆಗೆ ಬರುವ ಜನವರಿವರೆಗೆ ಸಮಯವಿದೆ ಈಗಾಗಲೇ ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ಕಡೆ ರಾಜಕೀಯ ಬದಲಾವಣೆ ಆಗುತ್ತಿವೆ. ಇದೇ ರೀತಿ ನಮ್ಮ ರಾಜ್ಯ ಹಾಗೂ ದೇಶದಲ್ಲಿ ರಾಜಕೀಯ ವಿಪ್ಲವ ಆಗಲಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

Read More Articles