ಎ.ಬಿ. ಗುರಕನವರ ಕಾರ್ಯ ಶ್ಲಾಘನೀಯ;ರೂಪಾ ಮುನವಳ್ಳಿ
- 15 Jan 2024 , 3:34 AM
- Belagavi
- 181
ಹುಕ್ಕೇರಿ: ಸಮಾಜದಲ್ಲಿ ಸ್ವಂತ ತಂದೆ-ತಾಯಿಗಳನ್ನೇ ಬೀದಿಪಾಲು ಮಾಡುವ ಮಕ್ಕಳಿರುವ ಇಂದಿನ ಸಮಾಜದಲ್ಲಿ ತಾಲೂಕಿನ ಹಿಡಕಲ್ ಡ್ಯಾಮನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಜೊತೆಗೆ ಕುಟುಂಬದ ಸದಸ್ಯರ ಒಪ್ಪಿಗೆಯ ಮೇರೆಗೆ ಎ.ಬಿ. ಗುರಕನವರ ಅವರು ವೃದ್ದಾಶ್ರಮ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಗೋಕಾಕ ಇನ್ನರ್ ವ್ಹೀಲ್ ಕ್ಲಬ್ ದ ಅಧ್ಯಕ್ಷೆ ರೂಪಾ ಮುನವಳ್ಳಿ ಹೇಳಿದರು. ಹಿಡಕಲ್ ಡ್ಯಾಂ ದ ಸಂಕಲ್ಪ ಸಂಸ್ಥೆಯ "ಸಂಕಲ್ಪ ವೃದ್ದಾಶ್ರಮ"ಕ್ಕೆ ದಿನೋಪಯೋಗಿ ವಸ್ತುಗಳನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಕ್ಲಬ್ ದ ಆಯಪಿಪಿ ವಿದ್ಯಾ ಮಗದುಮ್, ಸಂಸ್ಥೆಯ ಕಾರ್ಯದರ್ಶಿ, ಜ್ಯೋತಿ ವರದಾಯಿ, ಖಜಾಂಚಿ ಜಯಾ ಕಮತ, ಆಯ್ ಎಸ್ ಓ ಅನಸೂಯ ದುಳಾಯಿ ಹಾಗೂ ಸದಸ್ಯರಾದ ರಾಜೇಶ್ವರಿ ಕಲ್ಲೋಳಿ, ವಂದನಾ ವರದಾಯಿ, ಅಶ್ವಿನಿ ಬರಮನ್ನವರ ಸೇರಿದಂತೆ ವೃದ್ದಾಶ್ರಮ ದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.












