ಬೆಳಗಾವಿ: ಮಹಾಮಾರಿ ಕೊರೊನಾದ ಹಿನ್ನಲೆಯಲ್ಲಿ ಇಷ್ಟು ದಿನ ಬಂದ ಆಗಿದ್ದ ಬೆಳಗಾವಿ ನಗರದ ಕಪಿಲೇಶ್ವರ್ ದೇವಸ್ಥಾನ ಇಂದು ಆರಂಭ ಆಗಿದೆ, ದೇಶದ ಪ್ರಮುಖ ಶಿವಾಲಯಗಳಲ್ಲೊಂದಾದ ಈ ದೇವಸ್ಥಾನದಲ್ಲಿ ಶಿವನನ್ನು ಲಿಂಗರೂಪದ ಬದಲಿಗೆ ಪೀಠ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ. ಈ ಕಪಿಲೇಶ್ವರನ ದರ್ಶನ ಪಡೆಯಲು ಭಕ್ತರು ಅಗಮಿಸುತ್ತಿದ್ದು ಕಮಿಟಿಯವರು ದೇವಸ್ಥಾನವನ್ನು ತಳಿರು, ತೋರಣಗಳನ್ನು ಕಟ್ಟಿ ಸಿಂಗರಿಸಿದ್ದಾರೆ. ಈ ದೇವಸ್ಥಾನಕ್ಕೆ ಆದಿ ಶಂಕರಾಚಾರ್ಯರು ಶಿಷ್ಯ ಬಳಗದೊಂದಿಗೆ ಬೀಡು ಬಿಟ್ಟು ಇಲ್ಲಿ ರುದ್ರಾಭಿಷೇಕ, ಪೂಜಾ-ವಿಧಿವಿಧಾನ ಪೂರೈಸಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳಗಾವಿ ನಗರ ಹೃದಯ ಭಾಗದಲ್ಲಿರುವ ಕಪಿಲೇಶ್ವರ ಮಂದಿರಕ್ಕೆ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಕೋರೊನಾ ಸಂಬಂಧ ಇಷ್ಟು ದಿನಗಳ ಕಾಲ ಬಂದ ಆಗಿದ್ದ ದೇವಸ್ಥಾನ ಈಗ ಓಪನ್ ಆಗುತ್ತಿದದ್ದು ಖುಷಿಯ ಸಂಗತಿ. ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶ ನೀಡುತ್ತಿದ್ದು, ಮಾಸ್ಕ ಧರಿಸದವರಿಗೆ ಒಳಗೆ ಪ್ರವೇಶಿಸಲು ಬಿಡುತ್ತಿಲ್ಲ, ಬರುವ ಭಕ್ತರು ಸಾಮಾಜಿಕ ಅಂತರ ಪಾಲನೆ ಮಾಡುತ್ತಿದ್ದು ಪ್ರವೇಶಿಸುವ ಮೊದಲೇ ಸ್ಯಾನಿಟೈಸರ್ ಸ್ಕ್ರೀನ್ ಟೆಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮಹಾಮಾರಿ ಕೋರೊನಾ ಹಿನ್ನಲೆಯಲ್ಲಿ ಇಷ್ಟು ದಿನಗಳ ಕಾಲ ಬಂದ ಆಗಿದ್ದ ಈ ದೇವಸ್ಥಾನ ಇಂದು ಪುನರ್ ಆರಂಭ ಆಗುತಿದದ್ದು ಆಗುತ್ತಿರುವುದು ಸಂತಸ ತಂದಿದೆ. ಎಂದು ಲೋಕಲವಿವ್ಯೂಗೆ ತಿಳಿಸಿದ್ದಾರೆ ಶಿವ ಭಕ್ತರಾದ ತಾನಾಜಿ ಕೋಳಿ.