ನದಿಗುಡಿಕ್ಷೇತ್ರ ಗ್ರಾಮದಲ್ಲಿ ಭಜನಾ ಸಂಗೀತ ಕಾರ್ಯಕ್ರಮ

ಹುಕ್ಕೇರಿ: ತಾಲೂಕಿನ ನದಿಗುಡಿಕ್ಷೇತ್ರ ಗ್ರಾಮದಲ್ಲಿ ಶುಕ್ರವಾರ ದಿ 27 ರಂದು ಘೋಡಗೇರಿ ಗ್ರಾ.ಪಂ ಮಾಜಿ ಸದಸ್ಯ ಮಗ್ಗಪ್ಪ ಅಡಿವೆಪ್ಪ ಮಾದರ ಇವರ ನೂತನ ಗೃಹ ಪ್ರವೇಶದ ಪ್ರಯುಕ್ತ ಭಜನಾ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಕಾ.ಹೊ ಶಿಂಧೆ ಆಗಮಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ರಾಜ್ಯಾಧ್ಯಕ್ಷ ಸುರೇಶ ರಾಯಪ್ಪಗೋಳ, ಅಜೀತ ಹರಿಜನ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತ ಹುಕ್ಕೇರಿ ತಾಲೂಕಾ ಅಧ್ಯಕ್ಷ ಪ್ರಕಾಶ ಹೊಸಮನಿ, ಘೋಡಗೆರಿ ಗ್ರಾ.ಪಂ ಮಾಜಿ ಅಧ್ಯಕ್ಷ ಮಗ್ಗಪ್ಪ ಅಡಿವೆಪ್ಪ ಮಾದರ, ಮಾರುತಿ ಪಾಟೀಲ, ಗೋಪಾಲ ಪಾಟೀಲ, ಸತ್ತಪ್ಪ ಹೊಸಮನಿ, ಪುರುಷೋತ್ತಮ ಪರಕನಹಟ್ಟಿ, ರಾಮಚಂದ್ರ ಮದಿಹಳ್ಳಿ, ಎಸ್.ಎಸ್.ಸುಲದಾಳ, ದತ್ತು ಹೆಳವರ, ಅರ್ಜುನ ಹೆಳವರ, ಮಲ್ಲಪ್ಪ ಹೆಳವರ, ಮಾರುತಿ ಹೆಳವರ, ಇವರು ಉಪಸ್ಥಿತರಿದ್ದರು. ಕಲಾವಿದರಾದ ಕೆಂಪಣ್ಣ ಶಿವಾಪೂರ, ಬಸವಣ್ಣಿ ಪಾಶ್ಚಾಪೂರಿ, ಕುಮಾರ ನಂದಗಾಂವ, ವಿರುಪಾಕ್ಷ ಹುಲಿಕಟ್ಟಿ, ಕಲ್ಲಪ್ಪ ಶರಣರು, ಮಾದೇವ ಮಾಸ್ತರ ನಂದಿ, ಶ್ರವಣಕುಮಾರ ಶಿರಗಾಂವ ಮುಂತಾದವರು ಭಾಗವಹಿಸಿ ಪ್ರೇಕ್ಷಕರಿಗೆ ಸಂಗೀತದ ರಸದೂತನ ಉಣಬಡಿಸಿದರು. ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಎ.ಎಮ್.ಕರ್ನಾಚಿ, ರಮೇಶ ನಾಯಿಕ ಇವರನ್ನು ಹಿರಿಯ ಸಾಹಿತಿಗಳಾದ ಕಾ.ಹೊ.ಶಿಂಧೆ ಸತ್ಕರಿಸಿದರು.

promotions

promotions

Read More Articles