ಸಹಕಾರಿ ಸಂಸ್ಥೆಗಳಿಂದ ಗ್ರಾಮೀಣಾಭಿವೃದ್ಧಿ ಸಾಧ್ಯ, ರವೀಂದ್ರ ಜಿಂಡ್ರಾಳಿ

ಹುಕ್ಕೇರಿ: ಸಹಕಾರಿ ಸಂಸ್ಥೆಗಳ ಮೂಲಕ ಕಡು ಬಡವ ಹಾಗೂ ಮಧ್ಯಮ ವರ್ಗದವರಿಗೆ ಸಕಾಲಕ್ಕೆ ಆರ್ಥಿಕ ಸಹಾಯ ನೀಡಲಾಗುತ್ತಿದ್ದು ಈ ಮೂಲಕ ಹಳ್ಳಿಗಳ ಅಭಿವೃದ್ಧಿ ಜೊತೆ ಜೊತೆಗೆ ದೇಶದ ಅಭಿವೃದ್ಧಿಯು ಸಾಧ್ಯವಾಗುತ್ತಿದೆ ಎಂದು ದಿ. ಯಮಕನಮರಡಿ ಲಕ್ಷ್ಮೀ ಅರ್ಬನ ಕ್ರೆಡಿಟ್ ಸೌಹಾರ್ದ ಸಹಕಾರಿಯ ಸಂಸ್ಥಾಪಕರಾದ ರವೀಂದ್ರ ಜಿಂಡ್ರಾಳಿ ಹೇಳಿದರು. ರವಿವಾರ ದಿ.29 ರಂದು ಸ್ಥಳಿಯ ಶ್ರೀ ಬನಶಂಕರಿ ಕಾರ್ಯಲಯದಲ್ಲಿ ಏರ್ಪಡಿಸಲಾಗಿದ್ದ ದಿ. ಯಮಕನಮರಡಿ ಲಕ್ಷ್ಮೀ ಅರ್ಬನ ಕ್ರೆಡಿಟ್ ಸೌಹಾರ್ದ ಸಹಕಾರಿಯ 24 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು ಕರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ಜನರಿಗೆ ಸಕಾಲಕ್ಕೆ ಸಾಲ ನೀಡುವುದರ ಮೂಲಕ ಸಹಕಾರಿಯ ಸಿಬ್ಬಂದಿ ವರ್ಗದವರು ಕರೋನಾ ವಾರಿಯರ್ಸದಂತೆ ಕೆಲಸ ಮಾಡಿದ್ದಾರೆ. ಮಹಿಳಾ ಸಬಲೀಕರಣವು ಸಹಕಾರಿ ಕ್ಷೇತ್ರದಿಂದ ಮಾತ್ರ ಸಾಧ್ಯವಾಗಿದ್ದು ಮಹಿಳೆಯರು ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸಾಲ ಪಡೆದು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಹುಕ್ಕೇರಿ ತಾಲೂಕಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಗುಂಡಾಳಿ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ಅನೇಕ ಬ್ಯಾಂಕುಗಳು ಮುಚ್ಚುವ ಸ್ಥಿತಿಯಲ್ಲಿದ್ದು ಆದರೆ ಈ ಸಂಸ್ಥೆಯ ಆಡಳಿತ ಮಂಡಳಿಯವರ ನಿಸ್ವಾರ್ಥ ಸೇವೆ ಹಾಗೂ ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಕೆಲಸದಿಂದ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಎಸ್.ವಿ.ಕೆಂಚಗಾರಟ್ಟಿ ಮಾತನಾಡುತ್ತ ಸಂಸ್ಥೆಯು ಸುಮಾರು 28.70 ಕೋಟಿ ರೂಗಳ ದುಡಿಯುವ ಬಂಡವಾಳ ಹೊಂದಿದ್ದು, ಸುಮಾರು 25 ಕೋಟಿ ರೂ ಗಳ ಠೇವಣಿ ಹೊಂದಿದೆ. ಸುಮಾರು 19 ಕೋಟಿ ರೂ ಗಳ ಸಾಲವನ್ನು ನೀಡಲಾಗಿದೆ ಎಂದು ವರದಿ ವಾಚನ ಗೈದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅಡಿವೆಪ್ಪಾ ಜಿಂಡ್ರಾಳಿ ವಹಿಸಿದ್ದರು. ಶಿಕ್ಷಕ ರಂಜಾನ ನಧಾಫ ಸಿಬ್ಬಂದಿ ನಿಂಗನಗೌಡ ಪಾಟೀಲ ಮತ್ತು ಸಮರ್ಥ ರವೀಂದ್ರ ಜಿಂಡ್ರಾಳಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಣ, ಕೃಷಿ, ಸಹಕಾರಿ, ಸಾಹಿತ್ಯ, ಸಾಮಾಜಿಕ ರಂಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರಿಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ನಿರ್ದೇಶಕ ಜೋಮಲಿಂಗ ಪಟೋಳಿ, ಹುಕ್ಕೇರಿ ತಾ.ಪಂ ಅಧ್ಯಕ್ಷ ದಸ್ತಗೀರ ಬಸ್ಸಾಪೂರಿ, ಸಂಸ್ಥೆಯ ಉಪಾಧ್ಯಕ್ಷ ಬಾಳಪ್ಪಾ ಮಲಾಜಿ ಸೇರಿದಂತೆ ಸಂಸ್ಥೆಯ ಎಲ್ಲ ನಿರ್ದೇಶಕ ಮಂಡಳಿ, ಸದಸ್ಯರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

promotions

promotions

Read More Articles