ಸಂಭ್ರಮದಿಂದ ಜರುಗಿದ ಉರಸ ಕಾರ್ಯಕ್ರಮ

ಬೆಳಗಾವಿ: ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ದಿ. 25, 26 ರಂದು ಎರಡು ದಿನಗಳ ಕಾಲ ಪೀರಾನು ಪೀರ ಮೆಹಬೂಸಬಾನಿ ಉರಸ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಮೊದಲನೆ ದಿನ ಗಂಧದ ಕಾರ್ಯಕ್ರಮ, 2 ನೇ ದಿನ ಮಹಾಪ್ರಸಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ, ಕಾಕತಿ ಜಿ.ಪಂ ಸದಸ್ಯ ಸಿದ್ದಗೌಡ ಸುಣಗಾರ, ಚಿಕ್ಕೋಡಿ ಜಿಲ್ಲಾ ಕಾಂಗ್ರೇಸ ಎಸ್.ಟಿ ಘಟಕದ ಅಧ್ಯಕ್ಷ ರಾಮಣ್ಣ ಗುಳ್ಳಿ, ಹೊಸ ವಂಟಮೂರಿ ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ಎಲ್.ಎನ್.ಪಾಟೀಲ, ಶಿವಪ್ಪಾ ವಣ್ಣೂರಿ, ಸಿದ್ದಪ್ಪ ಹೊಲಕಾರ ಮತ್ತು ಗೌಸ ಗೋಕಾಕ, ದಾದರ ಬಸ್ಸಾಪೂರಿ, ಅಬ್ದುಲ ನರ್ಗಾಚಿ, ಚಂದಸಾಬ ಚೌಪದಾರ, ಚಾಂದಸಾಬ ಮುಲ್ಲಾ, ಮಲೀಕ ಮುಲ್ಲಾ, ಬಾಬಸಾಬ ಬಸ್ಸಫೂರಿ, ಜಂಗ್ಲೀಸಾಬ ನಾಯಿಕ, ಆಜಾದ ಮುಲ್ಲಾ, ಮುಸ್ತಾಕ ಜಮಾದಾರ ಹಾಗೂ ಗ್ರಾಮದ ಹಿಂದೂ ಮುಸ್ಲೀಂ ಬಾಂಧವರು ಉಪಸ್ಥಿತರಿದ್ದರು.

promotions

promotions

Read More Articles