"ಕನ್ನಡ ಬಳಸಿ ಕನ್ನಡ ಬೆಳೆಸಿ" ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ

  • 23 Dec 2023 , 6:13 AM
  • Haveri
  • 101

ಬ್ಯಾಡಗಿ: ನಮ್ಮ ನೆಲ,ಜಲ, ಭಾಷೆ, ಗಡಿ ಸಮಸ್ಯೆಗಳು ಬಂದಾಗ ಒಗ್ಗಟ್ಟು ಪ್ರದರ್ಶಿಸುತ್ತೇವೆ. ಭಾಷೆ ಉಳಿಸಿ, ಬೆಳೆಸಿ ಎಂದು ಭಾಷಣ ಮಾಡಿದರೆ, ಉಳಿಯಲ್ಲ, ಮಕ್ಕಳನ್ನು ಕನ್ನಡ ಮಾದ್ಯಮದಲ್ಲಿ ಓದಿಸಬೇಕೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕರೆ ನೀಡಿದರು. ಪಟ್ಟಣದ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲೂಕು ಕಸಾಪ ಘಟಕದ ಆಶ್ರಯದಲ್ಲಿ ಜರುಗಿದ "ಕನ್ನಡ ಬಳಸಿ ಕನ್ನಡ ಬೆಳೆಸಿ" ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ನೆಲ, ಜಲದ ವಿಚಾರ ಬಂದಾಗ ರಾಜೀಯಾಗುವ ಪ್ರಶ್ನೆಯಿಲ್ಲ, ಎಲ್ಲಿಯೂ ಒಂದಿಂಚೂ ಜಾಗೆಯನ್ನು ನಾವು ಬಿಟ್ಟುಕೊಡುವುದಿಲ್ಲ, ಕನ್ನಡಿಗರು ಭಾಷಾಭಿಮಾನಿಗಳಾಗಿದ್ದು, ಜ್ಞಾನಕ್ಕಾಗಿ, ಉದ್ಯೋಗಕ್ಕಾಗಿ ಬೇರೆ ಭಾಷೆ ಕಲಿಯಲಿ ತಪ್ಪೇನಿಲ್ಲ.

promotions

ವೇದಿಕೆ, ಭಾಷಣ ಹಾಗೂ ಘೋಷಣೆ ಹಾಕುವುದರಿಂದ ಕನ್ನಡ ಉಳಿಸಲು ಸಾದ್ಯವಿಲ್ಲ, ಭಾಷೆ ಬಳಕೆ ಹಾಗೂ ಸಾಹಿತ್ಯ ಓದುವ ಮೂಲಕ ನಾವೆಲ್ಲ ಕನ್ನಡದ ಉಳಿವೆಗೆ ಪಣ ತೊಡಬೇಕಿದೆ ಪ್ರತಿಯೊಬ್ಬರು ಮಾತೃ ಭಾಷೆಗೆ ಒತ್ತು ನೀಡುವಂತೆ ಮನವಿ ಮಾಡಿದರು. ಶಿಕ್ಷಕ ಮಾಲತೇಶ ಚಳಗೇರಿ "ಕನ್ನಡ ಭಾಷಾ ಬೆಳವಣಿಗೆಗೆ ಇರುವ ಅಡೆ ತಡೆಗಳು" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಪಾಲಕರಲ್ಲಿ ಇಂಗ್ಲೀಷ ಭಾಷೆಯ ವ್ಯಾಮೋಹ ಹೆಚ್ಚಾಗಿ ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ತಲೆದೋರಿದೆ. ನಾವು ಮೊದಲು ಕನ್ನಡ ಮಾದ್ಯಮಕ್ಕೆ ಒತ್ತು ನೀಡಬೇಕು. ಕನ್ನಡ ದಿನಪತ್ರಿಕೆ, ಪುಸ್ತಕ ಓದುವ ಹವ್ಯಾಸವನ್ನು ಮಕ್ಕಳು ಸೇರಿದಂತೆ ನಾವೆಲ್ಲ ಬೆಳೆಸಿಕೊಳ್ಳೋಣ. ಹಾವೇರಿ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ಜರುಗಲಿರುವುದು ಹೆಮ್ಮೆಯ ವಿಚಾರವಾಗಿದೆ. ಜಿಲ್ಲೆ ರಾಜ್ಯದಲ್ಲಿ ಸಾಂಸ್ಕøತಿಕ, ಧಾರ್ಮಿಕ ಸೇರಿದಂತೆ ವಿವಿಧ ವಿಶಿಷ್ಟತೆಗಳಿಗೆ ಖ್ಯಾತಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ನಿವೃತ್ತ ಪ್ರಾಚಾರ್ಯ ಎಸ್.ಬಿ.ತವರದ, ಪ್ರಕಾಶ ಮನ್ನಂಗಿ, ಹೆಚ್.ಡಿ.ಪುರದ, ಕಸಾಪ ಪದಾಧಿಕಾರಿಗಳಾದ ವೀರೇಂದ್ರ ಶೆಟ್ಟರ, ಮಾಲತೇಶ ಅರಳೀಮಟ್ಟಿ, ಮಂಜುನಾಥ ಬೋವಿ, ಮಹೇಶ ನಾಯಕ, ಸುಧಾ ಹನುಮಳ್ಳಿಮಠ, ವಾಯ್.ಟಿ ಹೆಬ್ಬಳ್ಳಿ, ಐ.ಬಿ ಮುದಿಗೌಡ್ರ ಹಾಗೂ ಇತರರು ಉಪಸ್ಥಿತರಿದ್ದರು.

promotions

Read More Articles