
ಕೋವಿಡ್ ನಿಯಂತ್ರಣಕ್ಕೆ ದೇವರ ಮೊರೆ ಹೋದ ಬಾಳಸಾಹೇಬ ಉದಗಟ್ಟಿ
- 14 Jan 2024 , 7:06 PM
- Belagavi
- 89
ಬೆಳಗಾವಿ: ಕೋವಿಡ್-19 ಸೋಂಕು ಕಡಿಮೆಯಾಗಿ ಮೊದಲಿನಂತೆ ಜನರು ಭಯ ಮುಕ್ತವಾಗಿರುವಂತೆ ಚಿಕ್ಕೋಡಿ ತಾಲೂಕಿನ ಶಿರಗಾವಿ ಗ್ರಾಮದ ಚಾಮುಂಡೇಶ್ವರಿ ದೇವಿ ಹಾಗೂ ನಂದಿ ಬಸವೇಶ್ವರ ಮಹಾದೇವ ದೇವಾಸ್ಥಾನದಲ್ಲಿ ಸಮಾಜ ಸೇವಕ ಬಾಳಸಾಹೇಬ ಉದಗಟ್ಟಿ ಗುರುವಾರ ವಿಶೇಷ ಪೂಜೆ ನೆರವೆರಿಸಿದರು.


ವರ್ಷ ಕೋವಿಡ್ ಪೂರ್ಣ ತೊಲಗಲಿ,ಹಾಗೂ ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪೂಜೆಯನ್ನ ಶ್ರೀ ಯುತ ಬಾಳಾಸಾಹೇಬ ಉದಗಟ್ಟಿ ಸಮಾಜ ಸೇವಕರು ರಕ್ತದಾನಿಗಳು ಹಾಗೂ ಅಮ್ಮ ಪ್ರತಿಷ್ಟಾನದ ಅಧ್ಯಕ್ಷರೂ, ಪುಟ್ಟು ಪೂಜಾರಿ ಅಪ್ಪಾಸಾಬ ಪೂಜಾರಿ ಎಲ್ಲಾರೂ ಕೂಡಿ ಲೋಕ ಕಲ್ಯಾಣಕ್ಕಾಗಿ ಪೂಜೆಯನ್ನ ಮಾಡಿಸಿದರು.
