ಗಣೇಶ ಹಬ್ಬಕ್ಕೆ ನಿರ್ಬಂಧ ಯಾಕೆ? ಮುತಾಲಿಕ ಪ್ರಶ್ನೆ
- 15 Jan 2024 , 3:22 AM
- Bengaluru
- 115
ಸರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ಹಾಕಿರುವುದು ಖಂಡನೀಯ. ಈ ಸೂಚನೆಯನ್ನು ಹಿಂಪಡೆಯಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಹಿಂದೂ ಹಬ್ಬ, ಜಾತ್ರೆಗೆ ಮಾತ್ರ ಸರಕಾರದ ನಿರ್ಬಂಧ ಏಕೆ ಎಂದು ಪ್ರಶ್ನಿಸಿದ ಅವರು, ಮುಸ್ಲಿಂ ಹಬ್ಬ ಮೋಹರಂಗೆ ಅನುಮತಿ ಕೊಡುತ್ತಿರಿ. ಎಲ್ಲಾ ಓಪನ್ ಆಗಿದೆ. ಕೋವಿಡ್ ಇದೆ ಎಂದು ಹೇಳಿ ನಿರ್ಬಂಧನೆ ಹೇರಿದರೆ ಸಾಧ್ಯವಿಲ್ಲ ಎಂದರು.

ಗಣೇಶ ಹಬ್ಬಕ್ಕೆ ಯಾಕೆ ಇದು ನಿರ್ಬಂಧ. ಗಣೇಶ ಹಬ್ಬಕ್ಕೆ ಸಾರ್ವಜನಿಕ ಇತಿಹಾಸ. ಪರಂಪರೆ ಜನರ ಭಕ್ತಿ ಇದೆ. ಒಂದು ಬಾರಿ ತಪ್ಪಿಸಿದರೆ ಜನರ ಭಾವನೆಯೊಂದಿಗೆ ಚೆಲ್ಲಾಟವಾಡುವುದು ಸರಕಾರದ ನಡೆ ಖಂಡನೀಯ ಎಂದರು.










