ಕೋರೊನಾ ಭಯವಿಲ್ಲದೆ ಹಬ್ಬವನ್ನು ಆಚರಿಸಿದ ಜನ
- 23 Dec 2023 , 6:29 AM
- Belagavi
- 122
ಉತ್ತರ ಕರ್ನಾಟಕದ ಎಲ್ಲ ಹಳ್ಳಿಗಳಲ್ಲಿ ಕಾರ ಹುಣ್ಣುಮೆ ಹಬ್ಬವನ್ನು ಈ ದಿನ ಜೋಳದ ಕಿಚಡಿಯನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ ಜಾನುವಾರುಗಳಿಗೆ ಪೂಜೆ ಮಾಡಿ ನೈವೇದ್ಯವನ್ನು ತಿನಿಸುತ್ತಾರೆ . ರೈತರು ತಮ್ಮ ಬಂಡಿಗೆ ಬೇಕಾಗುವ ಚಕ್ರ, ತೊಟ್ಟಿಲುಗಳ ಎತ್ತು ಬಂಡಿಯನ್ನು ಅಲಂಕಾರ ಮಾಡಿ ಎತ್ತುಗಳನ್ನು ಶೃಂಗರಿಸಿ ಅನುಕೂಲಕ್ಕೆ ತಕ್ಕಂತೆ ಆಭರಣ ಗಳನ್ನೂ ತೊಡಿಸುತ್ತಾರೆ. ಜೋಳದ ಅಂಬಲಿ, ಗಾನದೆಣ್ಣೆ, ಅರಿಶಿಣ ಪುಡಿ, ಮೊಟ್ಟೆ ಸೇರಿಸಿ ಗೊಟ್ಟದ ಮೂಲಕ ತೆಗೆದುಕೊಂಡು ತಮ್ಮ ತೋಟಕ್ಕೆ ಎಲ್ಲ ಕುಟುಂಬದವರು ಸೇರಿಕೊಂಡು ಹೋಗಿ ಬಹಳ ವೈವಿಧ್ಯಮಯ ವಾಗಿ ಕಾರ ಹುಣ್ಣುಮೆ ಹಬ್ಬವನ್ನು ಆಚರಿಸಿದರು .











