ಸಾಲಭಾದೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆಗೆ ಶರಣು
- 15 Jan 2024 , 12:24 AM
- Belagavi
- 172
ಅಥಣಿ: ಸಾಲಭಾದೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ತಾಲೂಕಿನ ತೆಲಸಂಗ ಗ್ರಾಮದಲ್ಲಿ ನಡೆದಿದೆ. ಸುಮಾರು ೩೭ ವರ್ಷ ವಯಸ್ಸಿನ ಸಿದ್ರಾಮ ದೇವಕಾತೆ ಎಂಬಾತ ಕರ್ನಾಟಕ ವಿಕಾಸ್ ಬ್ಯಾಂಕ್ ನಲ್ಲಿ ಹದಿನೈದು ಲಕ್ಷ , ಸೊಸೈಟಿ ಯಲ್ಲಿ ೩೫ ಸಾವಿರ ಸಾಲ, ಬೀರೇಶ್ವರ ಬ್ಯಾಂಕ್ ನಲ್ಲಿ ಮೂರುವರೆ ಲಕ್ಷ ಹಾಗೂ ಇನ್ನಿ ತರ ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದು ಆದ್ದರಿಂದ ಈತ ಸಾಲಭಾದೆ ತಾಳಲಾರದೆ ತಮ್ಮ ಹೊಲದಲ್ಲಿ ಮೋಟಾರ್ ಕರೆಂಟ್ ಹಿಡಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸಿದ್ರಾಮ ತನ್ನ ಮೂಲ ಬೇಸಾಯ ದ್ರಾಕ್ಷಿಯಾಗಿದ್ದು ಬೆಳೆ ಸಾಲವೆಂದೇ ಹಲವು ಬ್ಯಾಂಕಿನಿಂದ ಸಾಕಷ್ಟು ಪ್ರಮಾಣದ ಸಾಲ ಪಡೆದಿದ್ದ ಆದರೆ ದುರಾದೃಷ್ಟವಷಾತ್ ದ್ರಾಕ್ಷಿ ಬೆಳೆ ನಷ್ಟವಾಗಿದ್ದು,ಇದರಿಂದ ಅಂತಕಕೊಳಗಾದ ಈತ ಕೊನೆಗೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಕುಟುಂಬಸ್ಥರ ಹೇಳಿಕೆಯಾಗಿದೆ. ಮೃತನು ಪತ್ನಿ, ೩ ಜನ ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾನೆ. ಈ ಕುರಿತು ಐಗಳಿ ಪೊಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












