ಮಕ್ಕಳ ಆಟ ಪಾಠಕ್ಕೆ ಸ್ನೇಹಿತರಾಗಿ : ಪಾಲಕರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಲಹೆ

ಬೆಳಗಾವಿ: ಬೆಂಡಿಗೇರಿ ಗ್ರಾಮದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ 2023-2024 ಕಾರ್ಯಕ್ರಮ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಉಪಸ್ಥಿತಿಯಲ್ಲಿ  ನಡೆಯಿತು.

ಈ ವೇಳೆ ಮಾತನಾಡಿದ ಚನ್ನರಾಜ ಹಟ್ಟಿಹೊಳಿ, "ಪಾಲಕರು ತಮ್ಮ ಮಕ್ಕಳನ್ನು ಪ್ರೀತಿಸಿ, ಪ್ರೋತ್ಸಾಹಿಸಿ ಅವರಿಗೆ ಒಳ್ಳೆಯ ಮಾರ್ಗದರ್ಶನ ನೀಡುವುದರೊಂದಿಗೆ ಶಾಲೆಯ ತರಗತಿಗಳನ್ನು ತಪ್ಪಿಸದಂತೆ ಜವಾಬ್ದಾರಿ ವಹಿಸಬೇಕು. ಜತೆಗೆ ಅವರ ಆಟ ಪಾಠದಲ್ಲಿ ಸ್ನೇಹಿತರಾಗಿ ವರ್ತಿಸುವ ಮೂಲಕ ಆಧ್ಯಾತ್ಮದ ಕಡೆಗೂ ಒಲವು ತೋರಿಸಬೇಕು" ಎಂದರು.

ಇದೇ ವೇಳೆ, ನೂತನವಾಗಿ ನಿರ್ಮಾಣಗೊಂಡ  ಶಾಲಾ ಕಟ್ಟಡವನ್ನು ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.   ಡಿಡಿಪಿಐ ಬಸವರಾಜ ನಾಲತ್ವಾಡ್, ಎಸ್.ಡಿ. ಗಂಜಿ, ಬಿ.ಎಚ್. ಮೆಲನಟ್ಟಿ, ಲಕ್ಷ್ಮಣರಾವ್ ಯಕ್ಕುಂಡಿ, ಎ.ವೈ. ಬೆಂಡಿಗೇರಿ, ವೀರೇಂದ್ರ ಮೇಳೆದ್, ನೀಲವ್ವ ಹುಲಿಕವಿ, ಸಿದ್ದು ಹಾವಣ್ಣವರ, ಮುರುಸಿದ್ದ ಬಾಳೇಕುಂದ್ರಿ, ಪ್ರಕಾಶ ಪಾಟೀಲ, ರವಿ ಮೇಳೆದ್, ಬಸವ್ವ ಚೌಹ್ಹಾಣ, ಶಾಲಾ ಸಿಬ್ಬಂದಿ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Read More Articles