ಜನ ಸೇವೆಯೇ ಜನಾರ್ಧನ ಸೇವೆ ಎನ್ನುವ ನಂಬಿಕೆಯಿಂದ ಕೆಲಸ ಮಾಡುತ್ತಿದ್ದೇನೆ - ಲಕ್ಷ್ಮೀ ಹೆಬ್ಬಾಳಕರ್.

krpp

ಬೆಳಗಾವಿ: ರಾಜಕಾರಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ನಾವಿದ್ದರೂ ಸತ್ಯ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಜನರು ಮತ್ತು ದೇವರು ಎಂದಿಗೂ ಕೈ ಬಿಡುವುದಿಲ್ಲ. ನನ್ನ ಜೀವನದಲ್ಲಿ ನಾನು ಎಂದಿಗೂ ಕ್ಷುಲ್ಲಕ ರಾಜಕಾರಣ ಮಾಡಿಲ್ಲ. ಜನ ಸೇವೆಯೇ ಜನಾರ್ಧನ ಸೇವೆ ಎನ್ನುವ ನಂಬಿಕೆಯಿಂದ ಕೆಲಸ ಮಾಡುತ್ತ ಬಂದಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗುಂದಿ ಗ್ರಾಮದ ಶ್ರೀ ರವಳನಾಥ ಯಾತ್ರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ  ಮಾತನಾಡಿದ ಅವರು, ಕ್ಷೇತ್ರದ ಜನರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಈ ವಿಶ್ವಾಸವನ್ನು ಎಂದಿಗೂ ಉಳಿಸಿಕೊಳ್ಳುತ್ತೇನೆ. ಜನರು ತೋರಿಸುತ್ತಿರುವ ಪ್ರೀತಿಯ ಋಣವನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಎಂದೂ ಅಭಿವೃದ್ದಿ ವಿಷಯದಲ್ಲಿ ರಾಜಕಾರಣ ಮಾಡಿಲ್ಲ. ಎಲ್ಲ ಪ್ರದೇಶ, ಎಲ್ಲ ಜಾತಿ, ಜನಾಂಗಗಳ ಸೇವೆ ಮಾಡುತ್ತಿದ್ದೇನೆ. ನಿಮ್ಮ ಆಶಿರ್ವಾದ ಮುಂದಿನ ದಿನಗಳಲ್ಲಿ ಸಹ ಇದೇ ರೀತಿ ಇರಲಿ ಎಂದು ಅವರು ವಿನಂತಿಸಿದರು. 

ಈ ಸಮಯದಲ್ಲಿ ಗ್ರಾಮದ ಹಿರಿಯರು, ಶಿವಾಜಿ ಬೋಕಡೆ, ಯಲ್ಲಪ್ಪ ಡೇಕೋಳ್ಕರ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಗೀತಾ ಡೇಕೊಳ್ಕರ್, ದಯಾನಂದ ಗೌಡ, ರೆಹಮಾನ್ ತಹಶಿಲ್ದಾರರ, ಸುರೇಶ ಕೀಣೆಕರ್, ಮಹಾದೇವ ಪಾಟೀಲ, ಪ್ರಸಾದ ಬೋಕಡೆ, ಲಕ್ಷ್ಮಣ ಮುಗುಟಕರ್, ಪ್ರಹ್ಲಾದ ಚಿರಮುರ್ಕರ್, ಸೋಮನ ಗೌಡ, ಪ್ರಾನ್ಸಿಸ್ ಲೋಬೊ, ಮೆಹಬೂಬ ಮುಜಾವರ, ಅಜಿತ್ ಕದಂ, ಬಸವಂತ ಕಡೋಲ್ಕರ್, ಸಾಗರ ಕಣ್ಣೂರಕರ್, ಜ್ಞಾನೇಶ್ವರ ಬಾಂಡಗೆ, ಸಂಪತ್ ಕಡೋಲ್ಕರ್, ನಿಂಗೂಲಿ ಚರಣ ಗೀತಾ ಡೇಕೋಳ್ಕರ್, ನೀಲಂ ಚಿರಮುರ್ಕರ್ ಮುಂತಾದವರು ಉಪಸ್ಥಿತರಿದ್ದರು.

Latest Articles