

ಅಥಣಿ : ಸಾರ್ವತ್ರಿಕ ಚುನಾವಣೆ ಮುಗಿದ ಮೇಲೆ ಸರ್ಕಾರ ರಚನೆಗೆ ಯಾರು ಒಳ್ಳೆಯ ಮೇಕಪ್ ಹಾಕಿಕೊಂಡು ಬರುತ್ತಾರೆ ಆವಾಗ ನೋಡೋಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿ, ಮತ್ತೆ ಜೆಡಿಎಸ್ ಪಕ್ಷ ಸಮ್ಮಿಶ್ರ ಸರ್ಕಾರ ರಚನೆಗೆ ಚಿಂತನೆ ನಡೆಸುತ್ತಿದ್ದಾರೆ ಎಂಬ ಸುಳಿಯುವನ್ನು ನೀಡಿದ್ದಾರೆ.
ಅವರು ಅಥಣಿ ಪಟ್ಟಣದಲ್ಲಿ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಶಹಜಹಾನ್ ಡೊಂಗರಗಾಂವ ರಾಜಕೀಯ ಸಾಧನೆ ಹಾಗೂ ಜೀವನ ಸಾಧನೆ ಕುರಿತ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾದ್ಯಮಗಳ ಜೊತೆ ಮಾತನಾಡಿ ಚುನಾವಣೆ ಮುಗಿಯಲಿ ಯಾರು ಒಳ್ಳೆಯ ಮೇಕಪ್ ಹಾಕಿಕೊಂಡು ಬರುತ್ತಾರೆ ನೊಡಿ ನಮ್ಮ ತೀರ್ಮಾನ ಎಂದು ಸಿಎಂ ಇಬ್ರಾಹಿಂ ಹೇಳಿದರು.
ಕಾಂಗ್ರೆಸ್ ಉಚಿತ ವಿದ್ಯುತ್ ನೀಡುವ ಘೋಷಣೆ ವಿಚಾರವಾಗಿ ಮಾತನಾಡಿ ನೀರು ಕೊಡದವರು ಉಚಿತವಾಗಿ ಮಜ್ಜಿಗೆ ನೀಡುತ್ತಾರಾ..? ಎಲ್ಲವೂ ಸುಳ್ಳು ಹೇಳುತ್ತಾರೆ, ಕುಮಾರಸ್ವಾಮಿ ಅವರು ಹೇಳಿದಂತೆ ನಡೆಯುತ್ತಾರೆ, ಪಂಚರತ್ನ ಯಾತ್ರೆಯಲ್ಲಿ ಹೇಳಿದಂತೆ ನಾವು ನುಡಿದಂತೆ ನಡೆಯುತ್ತೇವೆ ಎಂದು ಹೇಳಿದರು.
ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು ಬಿಜೆಪಿ ನಾಯಕರು ಪ್ರಶ್ನೆ ವಿಚಾರವಾಗಿ ಮಾತನಾಡಿ ರಾಜ್ಯದಲ್ಲಿ ಮೊದಲ ಬಾರಿಗೆ ಜೆಡಿಎಸ್ ಅಭ್ಯರ್ಥಿ ಲಿಸ್ಟ್ ಬಿಡುಗಡೆ ಮಾಡಲಾಗಿದೆ, ಈಗಾಗಲೇ ನಾವು ಗಂಡುಮಕ್ಕಳು 93 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದ್ದೇವೆ, ಬಿಜೆಪಿ ಅವರು ಒಂದೂ ಅಭ್ಯರ್ಥಿ ಹೆಸರು ಘೋಷಣೆ ಮಾಡಿಲ್ಲ, ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಯಲ್ಲಿಂದ ಸ್ವರ್ಧೆ ಮಾಡುತ್ತಾರೆ ಎಂಬುದು ಮೊದಲು ಹೇಳಲಿ ಎಂದು ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದರು ಹಾಗೂ ರಾಜ್ಯದಲ್ಲಿ ನಾವು 123 ಸ್ಥಾನ ಪಡೆಯುತ್ತೇವೆ ಬೆಳಗಾವಿ ಚಿಕ್ಕೋಡಿಯಲ್ಲಿ ಏಳು ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಲಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.