ದೇವಗಿರಿ ಗ್ರಾಮದ ಸ್ಮಶಾನ ಸಮಸ್ಯೆ ಬಗೆಹರಿಸುವಂತೆ ಒತ್ತಾಯ

ಬೆಳಗಾವಿ: ತಾಲೂಕಿನ ದೇವಗಿರಿ ಗ್ರಾಮದ ಸ್ಮಶಾನ ಜಾಗದ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಸೋಮವಾರ ದೇವಗಿರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ದೇವಗಿರಿ ಗ್ರಾಮವು ಸುಮಾರು ಮೂರು ಸಾವಿರ ಜನಸಂಖ್ಯೆ‌ ಹೊಂದಿದ್ದು, 80% ಲಿಂಗಾಯತ, 15% ನಾಯಿಕ ಹಾಗೂ 5% ಇನ್ನುಳಿದ ಸಮುದಾಯ ವಾಸಿಸುತ್ತಿದ್ದಾರೆ.

promotions

ಜಮೀನು ದರ ಹೆಚ್ಚಿಗೆಯಾಗಿರುವುದರಿಂದ ಕೆಲವರು ಸ್ಮಶಾನ ಭೂಮಿಯನ್ನು ಅತಿಕ್ರಮಣ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ  ಪರ್ಯಾಯ ಸ್ಮಶಾನ ಜಾಗೆ ನೀಡಬೇಕೆಂದು ಆಗ್ರಹಿಸಿದರು. ರಾಮಪ್ಪ‌‌ ಚುರುಮರಿ, ರಾಜು ಸುತಾರ, ಶ್ರೀದೇವಿ ಪಾಟೀಲ ಮಲಗೌಡ ಪಾಟೀಲ ಸೇರಿದಂತೆ ಹಲವಾರು ಹಾಜರಿದ್ದರು.

promotions

Read More Articles