
37 ಲಕ್ಷ ರೂಪಾಯಿ ವಾಪಸ್‌ಗೆ ಕೋರ್ಟ್ ಮೊರೆ ಹೋದ ದರ್ಶನ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಆಚೆ ಬಂದಿರುವ ದರ್ಶನ್ ವಿಚಾರಣೆ ವೇಳೆ ವಶಪಡಿಸಿಕೊಂಡಿದ್ದ ಹಣ ವಾಪಸ್ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೊಲೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಪೊಲೀಸರು ದರ್ಶನ್ ಅವರ ಬಳಿಯಿದ್ದ 37 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದರು.

ಈ ಹಣವನ್ನು ದರ್ಶನ್ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಬಳಸಿದ್ದರು ಎಂದು ಎನ್ನುವ ಆರೋಪ ಕೇಳಿ ಬಂದಿತ್ತು. ದರ್ಶನ್ ಅವರ ಮನೆಯಿಂದ ಪೊಲೀಸರು ಈ ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ದರ್ಶನ್ ಪರ ವಕೀಲರು ಹಣ ಎಲ್ಲಿಂದ ಬಂತು ಎನ್ನುವುದರ ಬಗ್ಗೆ ವಾದಿಸಿದ್ದರು. ಈ ಹಣ ದರ್ಶನ್ ಅವರು ಮೋಹನ್ ರಾಜ್ ಎಂಬುವವರಿಗೆ ಸಾಲವಾಗಿ ಕೊಟ್ಟಿದ್ದರು. ಇದನ್ನು ಮೋಹನ್ ರಾಜ್ ಅವರು ದರ್ಶನ್‌ಗೆ ಮರಳಿಸಿದ್ದರು.

ದರ್ಶನ್ ಇದನ್ನು ಮನೆಯಲ್ಲಿಟ್ಟಿದ್ದರು ಎಂದು ದರ್ಶನ್ ವಕೀಲರು ಹೇಳಿದ್ದರು. ಇದೀಗ ಈ ಹಣವನ್ನು ವಾಪಾಸ್ ನೀಡುವಂತೆ ದರ್ಶನ್ 57ನೇ ಸಿಸಿಎಚ್ ಕೋರ್ಟ್ನಲ್ಲಿ ತಮ್ಮ ಹಣ ವಾಪಸ್ ಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಂಬoಧ ಕೋರ್ಟ್ ಆದಾಯ ಇಲಾಖೆಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಸೂಚಿಸಿದೆ. ಆಕ್ಷೇಪಣೆ ಸಲ್ಲಿಕೆಯಾದರೆ ಈ ಸಂಬoಧ ವಾದ-ಪ್ರತಿವಾದ ನಡೆಯಲಿದೆ.