ಜ್ಞಾನದ ಕೇಂದ್ರ ಬಿಂದು ಪುಸ್ತಕ

ಇಂದು ವಿಶ್ವ ಪುಸ್ತಕ ದಿನ. ಪುಸ್ತಕಗಳು ನಿಜವಾದ ಜ್ಞಾನದ ಕೇಂದ್ರ ಬಿಂದು. ಆದರೆ ಇಂದು ಆ ಜಾಗವನ್ನು ಇಂಟರ್ ನೆಟ್ + ಯೂಟ್ಯೂಬ್ ಚಾನಲ್ ಗಳು ಆಕ್ರಮಿಸಿವೆ.‌ ಹಿಂದಿನ ಕಾಲದಲ್ಲಿ ಪುಸ್ತಕಗಳು ಒಬ್ಬ ವ್ಯಕ್ತಿಯ ಬದುಕನ್ನೇ ಉತ್ತಮ ಪ್ರಗತಿಯ ಕಡೆ ಬದಲಾಯಿಸಿದ ಅನೇಕ ಘಟನೆಗಳು ಇವೆ. ಈಗ ಅದೇ ಯೂಟ್ಯೂಬ್ ಚಾನಲ್ ಗಳು ಒಬ್ಬ ವ್ಯಕ್ತಿಯ ಬದುಕನ್ನೇ ನಾಶದ ಕಡೆಗೆ ಕರೆದುಕೊಂಡು ಹೋಗುತ್ತಿರುವ ಉದಾಹರಣೆಗಳು ಹೆಚ್ವಾಗುತ್ತಿವೆ.

promotions

ಇಂದು ನಮಗಾಗಿ ಅಲ್ಲದಿದ್ದರೂ ನಮ್ಮ ಮಕ್ಕಳಿಗಾಗಿ ಪುಸ್ತಕ ಓದುವ ಸಂಸ್ಕೃತಿಯನ್ನು ಮತ್ತೊಮ್ಮೆ ಬೆಳೆಸಬೇಕಾಗಿದೆ. ಅದು ಮನುಷ್ಯರಲ್ಲಿ ಕನಿಷ್ಠ ಮಟ್ಟದ ತಾಳ್ಮೆ ಪ್ರೀತಿ ಸಭ್ಯತೆ ಮಾನವೀಯತೆ ಬೆಳೆಸುತ್ತದೆ. ಅನೇಕ ಸಂಕಷ್ಟದ ಕಾಲದಲ್ಲಿ ಒಳ್ಳೆಯ ಪುಸ್ತಕಗಳು ನಮ್ಮ ಗೆಳೆಯರಂತೆ, ಹಿತೈಷಿಗಳಂತೆ, ಮಾರ್ಗದರ್ಶಕರಂತೆ ಕೆಲಸ ಮಾಡುತ್ತದೆ.

promotions

ಪುಸ್ತಕ ಕೊಳ್ಳಲು ಅನುಕೂಲ ಇರುವವರು ಕನಿಷ್ಠ ತಮ್ಮ ಸಂಪಾದನೆಯ ಸಣ್ಣ ಪ್ರಮಾಣದ ಹಣ ಮತ್ತು ತಮ್ಮ ಜೀವನದ ಸ್ವಲ್ಪ ಸಮಯವನ್ನು ಇದಕ್ಕಾಗಿ ವಿನೆಯೋಗಿಸಿದರೆ ಅದು ಈ ಸಮಾಜದ ನಿಜವಾದ ಸ್ವಾಸ್ಥ್ಯ ಕಾಪಾಡಲು ನಾವು ಕೊಡಬಹುದಾದ ಒಂದು ಸಣ್ಣ ಪರೋಕ್ಷ ಕೊಡುಗೆಯಾಗುತ್ತದೆ ಎಂದು ಭಾವಿಸುತ್ತಾ.

promotions

ಧನ್ಯವಾದಗಳು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.

Read More Articles