
ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ವಿಧಿವಶ
- 14 Jan 2024 , 6:24 PM
- Belagavi
- 91
ಬೆಳಗಾವಿ: ಕನ್ನಡಪರ ಹೋರಾಟಗಾರ , ಸಿರಿಗನ್ನಡ ಪ್ರತಿಷ್ಠಾನದ ಅಧ್ಯಕ್ಷ, ಹಾಗೂ ಹಲವು ದಶಕಗಳಿಂದ ಕನ್ನಡಪರ ಸೇವೆ ಮಾಡುತ್ತಿರುವ ಹಿರಿಯ ಕನ್ನಡ ಪರಿಚಾರಕ ಶಶಿಧರ ಘಿವಾರಿ (60) ವಿಧಿವಶರಾಗಿದ್ದಾರೆ.

ಕಿಲ್ಲರ್ ಕೊರೊನಾ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ. ಕನ್ನಡಪರ ಹೋರಾಟಗಾರರು, ನಾಡೋಜ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಇವರು ಬೆಳಗಾವಿಯಲ್ಲಿ ಕಳೆದ ದಶಕದ ಹಿಂದೆ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನವನ್ನು ತಾವೇ ಹುಟ್ಟುಹಾಕಿ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹಲವಾರು ರೀತಿಯ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

ಬಹುಮುಖಿ ವ್ಯಕ್ತಿತ್ವದ ಹೊಂದಿದ್ದ ಇವರು ಹಲವಾರು ಸಾಹಿತಿಗಳು, ಕನ್ನಡಪರ ಹೋರಾಟಗಾರರು ಸೇರಿದಂತೆ ಅಪಾರ ಅಭಿಮಾನ ಬಳಗವನ್ನು ಹೊಂದಿದ್ದು, ಗಡಿ ಜಿಲ್ಲೆ ಬೆಳಗಾವಿಗೆ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ. ಇವರ ನಿಧನದಿಂದಾಗಿ ಬೆಳಗಾವಿಯ ಜನತೆ ಒಬ್ಬ ಸಾಹಿತಿ, ಕನ್ನಡಪರ ಹೋರಾಟಗಾರರನ್ನು ಕಳೆದು ಕೊಂಡಿದ್ದು ತುಂಬಲಾರದಷ್ಟು ಹಾನಿ ಉಂಟಾಗಿದೆ.