ಕೆರಗೋಡು ಬಳಿಕ ಬೆಳಗಾವಿಯಲ್ಲಿ ಶುರುವಾಯಿತು ಧ್ವಜ ದಂಗಲ್
- shivaraj bandigi
- 4 Feb 2024 , 11:36 AM
- Belagavi
- 2391
ಬೆಳಗಾವಿ :
ಬೆಳಗಾವಿ ಜಿಲ್ಲೆಯ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಭಗವಾ ಧ್ವಜ ತೆರವು ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಭಗವಾ ಧ್ವಜ ತೆರವು ಖಂಡಿಸಿ ಚಲೋ ಎಂ.ಕೆ ಹುಬ್ಬಳ್ಳಿ ಕರೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿ ಪಟ್ಟಣ. ಬೆಳಗ್ಗೆ 10.30ಕ್ಕೆ ಗ್ರಾಮದಲ್ಲಿ ಬೃಹತ್ ಪಾದಯಾತ್ರೆ.
ಬಿಜೆಪಿ ನಾಯಕರು, ಹಿಂದೂ ಪರ ಕಾರ್ಯಕರ್ತರಿಂದ ಪಾದಯಾತ್ರೆ ನಡೆಸಲಿದ್ದಾರೆ.
ಇಡೀ ಗ್ರಾಮದಲ್ಲಿ ಭಗವಾ ಧ್ವಜ ಕಟ್ಟುವ ಅಭಿಯಾನ.
ದೊಡ್ಡ ಹನುಮಾನ ಮಂದಿರ ಬಳಿ ಭಗವಾ ಧ್ವಜಾರೋಹಣ ಮಾಡಲಿರುವ ಹಿಂದೂ ಕಾರ್ಯಕರ್ತರು. ಮತ್ತೊಂದು ಧ್ವಜ ದಂಗಲ್ ಗೆ ಕಾರಣವಾಗುತ್ತಾ ಎಂ.ಕೆ ಹುಬ್ಬಳ್ಳಿ ಪಟ್ಟಣ ಎಂಬ ಪ್ರಶ್ನೆ ಉದ್ಬವವಾಗಿದೆ.