ಪತ್ರಕರ್ತರ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಅಂದರ

ಬೆಳಗಾವಿ : ನಗರದಲ್ಲಿ ಇತ್ತೀಚಿಗೆ ನಡೆಯುತ್ತಿದ್ದ ಕಳ್ಳತನದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳನ್ನು ಪತ್ತೆ ಹಚ್ಚಲು ನಗರದ ಎಲ್ಲ ಪಿಎಸ್ಐ ಪಿಐ ರವರಿಗೆ ಸೂಚಿಸಿದಂತೆ, ಮಾಳ ಮಾರುತಿ ಪೊಲೀಸ್ ಠಾಣೆಯ ಪೊಲೀಸರು ಅಂತರ್ ರಾಜ್ಯ ಕಳ್ಳನಾದ ನಾಗರಾಜ್ ಸುಭಾಷ್ ಕಚೇರಿ ಕಮಲಾಪುರ್ ತಾ& ಜಿ ಗುಲ್ಬರ್ಗ ಸದ್ಯ ನವೀನ್ ಗರಕುಲ ಕುಂಬಾರಿ ಸೋಲಾಪುರ್ ಈತನನ್ನು ವಶಕ್ಕೆ ಪಡೆದುಕೊಂಡುವಿಚಾರಣೆಗೊಳಪಡಿಸಿದಾಗ ಇವನು ತನ್ನ ಗೆಳೆಯರೊಂದಿಗೆ ಸೇರಿ XUV 500 ಐಷಾರಾಮಿ ಕಾರಿನ ಮೇಲೆ *PRESS* ಅಂತ ಬರೆಯಿಸಿ, ಅದರಲ್ಲಿ ಬಂದು ಮಹಾಂತೇಶ್ ನಗರ ಆಂಜನೇಯ ನಗರ ಮತ್ತು ಶಿವಬಸವ ನಗರಗಳಲ್ಲಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾನೆ. ಆತನ ಕಡೆಯಿಂದ 10 ಲಕ್ಷ ಮೌಲ್ಯದ ಬಂಗಾರ, ಸುಮಾರು 10 ಲಕ್ಷದ xuv ಕಾರು ಹೀಗೆ ಒಟ್ಟು 20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

promotions

  ಈತನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಇತರೆ ಆರೋಪಿತಗಳಾದ .ಹುಸೇನ್ ಅಲಿಯಾಸ್ ಸಾಗರ್ ಗಾಯಕ್ವಾಡ್, .ಅಮುಲ್ ಹಾಗೂ ಕೇತ್ಯಾ ಎಂಬುವವರು ಪರಾರಿಯಾಗಿದ್ದು, ವಿಶೇಷ ತನಿಖಾ ತಂಡವನ್ನು ರಚಿಸಿ ಅವರ ಪತ್ತೆಗೆ ಬೀಸಲಾಗಿದೆ. 

promotions

ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಂತರ್ ರಾಜ್ಯ ಕಳ್ಳರ ಬಂಧನದಲ್ಲಿ ಶ್ರಮಿಸಿದ ಮಾರ್ಕೆಟ ಪೊಲೀಸ್ ಠಾಣೆ ವಿಭಾಗದ ಎಸಿಪಿ ಸೋಮೇಗೌಡ ಯು. ಜಿ. ಅವರ ಮಾರ್ಗದರ್ಶನದಲ್ಲಿ ಪಿಐ ಜಯಂ ಕಾಲಿ ಮಿರ್ಚಿ ಇವರ ನೇತೃತ್ವದ ತಂಡ ಹೊನ್ನಪ್ಪ ತಳವಾರ್ ಪಿಎಸ್ಐ ಶ್ರೀಶೈಲ್ ಹುಳಗೇರಿ ಪಿಎಸ್ಐ ಮತ್ತು ಸಿಬ್ಬಂದಿ ಎಂ ಜಿ ಕುರೇರ್, ಚಿನ್ನಪ್ಪಗೋಳ, ಬಸು ಬಸ್ತ, ಚಂದ್ರು ಚಿಗರಿ ಕೆ.ಬಿ. ಗೌರಾನಿ, ಹೊಸಮನಿ, ರವಿ ಬಾರಿಕರ್, ಮುಜಾವರ, ಶಿವಾಜಿ ಚೌಹಾನ, ಮಾರುತಿ ಮಾದರ, ಮಲ್ಲಿಕಾರ್ಜುನ್ ಗಾಡವಿ, ಜಗನ್ನಾಥ ಭೋಸ್ಲೆ, ಬಸವರಾಜ ಕಲ್ಲಪ್ಪನವರ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ್ ಅಕ್ಕಿ ಹಾಗೂ ಮಹಾದೇವ ಕಾಶಿದ ರವರ ತಂಡವನ್ನು ಬೆಳಗಾವಿಯ ಪೊಲೀಸ್ ಆಯುಕ್ತ ಯೆಡಾ ಮಾಟಿನ್ ಮಾರ್ಬನ್ಯಾಂಗ್ ಮತ್ತು ನಗರ ಹಾಗೂ ಡಿಸಿಪಿಗಳು ಪ್ರಶಂಸಿಸಿರುತ್ತಾರೆ.

promotions

Read More Articles