ರಾಜ್ಯಮಟ್ಟದ ಅಭ್ಯಾಕಸ್ ಸ್ಪರ್ಧೆಯಲ್ಲಿ ಆರ್ಯನ ಸೊಗಲ ಚಾಂಪಿಯನ್
- Krishna Shinde
- 15 Jan 2024 , 3:43 AM
- Belagavi
- 211
ಬೈಲಹೊಂಗಲ : ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ (D3 ಕ್ಯಾಟಗರಿ) ಬೈಲಹೊಂಗಲ ಬಸವ ನಗರ ನಿವಾಸಿ, ಪ್ರತಿಭಾನ್ವಿತ ವಿದ್ಯಾರ್ಥಿ ಆರ್ಯನ್ ರಾಜು ಸೊಗಲ ರಾಜ್ಯಕ್ಕೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ.
ಮೂರು ನಿಮಿಷಗಳಲ್ಲಿ 32 ಪ್ರಶ್ನೆಗಳಿಗೆ (ಗಣಿತ ಲೆಕ್ಕಗಳು) ಸರಿಯಾದ ಉತ್ತರ ನೀಡಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾನೆ.
ಈತನಿಗೆ ಬೆಳಗಾವಿಯ ಬ್ರೇನೋ ಬ್ರೈನ್ ಸಂಸ್ಥೆಯ ಶಿಕ್ಷಕಿ ಶ್ರೀಮತಿ ನಾಗರತ್ನಾ ದಾರೋಜಿ ಮಾರ್ಗದರ್ಶನ ನೀಡಿದ್ದರು.