'ಅಥಣಿ ಬಂದ್' ನಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಭಾಗಿಯಾಗಿ : ಸವದಿ

ಅಥಣಿ : ಅಥಣಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಬರುವ ಡಿಸೆಂಬರ್ 11 ರಂದು ಸ್ವಯಂ ಪ್ರೇರಿತವಾಗಿ 'ಅಥಣಿ ಬಂದ್' ಗೆ ಕರೆಕೊಡಲಾಗಿದ್ದು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರೂ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಅಥಣಿ ಬಂದ್ ಯಶಸ್ವಿಗೊಳಿಸಿ ಎಂದು ಮುಖಂಡ ಶಿವಕುಮಾರ ಸವದಿ ಅವರು ಕರೆ ಕೊಟ್ಟರು.

promotions

ಅವರು ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿ ಡಿಸೆಂಬರ್ 11 ರಂದು ಬೆಳಿಗ್ಗೆ ಪಟ್ಟಣದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರತಿಭಟನಾ ರ್ಯಾಲಿ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹಾದು ಬಸವೇಶ್ವರ ವೃತ್ತದಲ್ಲಿ ಸಮಾಪ್ತಿಯಾಗಲಿದೆ, ಈ ವೇಳೆ ಪ್ರತಿಭಟನೆಯಲ್ಲಿ ಕಾಗವಾಡ, ಸಾವಳಗಿ, ತೇರದಾಳ, ಜಮಖಂಡಿ ಸೇರಿದಂತೆ ಸುತ್ತಮುತ್ತಲಿನ ಸರ್ವ ಜನತೆ ಸ್ವಯಂ ಪ್ರೇರಿತವಾಗಿ ಆಗಮಿಸಿ ಬೆಂಬಲ ಸೂಚಿಸುವವರಿದ್ದು ಅಥಣಿ ತಾಲೂಕಿನಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗಿಯಾಗಿ ಎಂದರು.

promotions

ಮುಂದಿವರೆದು ಮಾತನಾಡಿ ನೂತನ ಜಿಲ್ಲಾ ರಚನೆ ಮಾಡಬೇಕೆಂಬ ಬೇಡಿಕೆ ಹಿನ್ನಲೆ ಅನೇಕ ತಾಲೂಕು ಕೇಂದ್ರಗಳು, ಹೋಬಳಿ ಹಾಗೂ ಗ್ರಾಮಗಳ ಸಾರ್ವಜನಿಕರು ಬೆಂಬಲ ಕೊಡುತ್ತೆವೆ ಎಂದು ತಿಳಿಸಿದ್ದು, ಅವರೆಲ್ಲರೂ ತಮ್ಮ ಊರಿನ ಜನರನ್ನು ಕರೆದುಕೊಂಡು ಪ್ರತಿಭಟನೆಗೆ ಆಗಮಿಸಿ ಎಂದರು. ಈ ಹೋರಾಟ ಯಾವ ಪಕ್ಷಕ್ಕೆ ಸೀಮಿತವಾಗಿಲ್ಲ ಇದು ಸಾರ್ವಜನಿಕರ ಹೋರಾಟವಾಗಿದೆ ದಯವಿಟ್ಟು ಜನತೆ ಹೋರಾಟದಲ್ಲಿ ಭಾಗಿಯಾಗಿ ಎಂದರು.

ಅನಂತರ ಜಿಲ್ಲಾ ಹೋರಾಟ ಸಮೀತಿ ಸದಸ್ಯರು ಪಟ್ಟಣದ ಪ್ರಮುಖ‌ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸ್ವಯಂ ಪ್ರೇರಿತವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು. ಈ ವೇಳೆ ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷ ಪ್ರಶಾಂತ ತೋಡಕರ, ದೇವೆಂದ್ರ ಬಿಸ್ವಾಗರ, ರಾಮನಗೌಡ ಪಾಟೀಲ, ಎಸ್ ಆರ್ ಘೂಳಪ್ಪನವರ, ಅರುಣ ಭಾಸಿಂಗಿ, ವಿನಯಗೌಡ ಪಾಟೀಲ, ಪ್ರಮೋಧ ಬಿಳ್ಳೂರ, ಶಶಿಧರ ಬರ್ಲಿ, ರವಿ ಬಡಕಂಬಿ, ನರಸು ಬಡಕಂಬಿ, ಅಪ್ಪು ಪೂಜಾರಿ, ಮಲ್ಲು ಬುಟಾಳಿ, ಅಸೀಫ ತಾಂಬೋಳಿ, ಆಕಾಶ ನಂದಗಾವ, ಸಂತೋಷ ಬಡಕಂಬಿ, ಶ್ರೀಶೈಲ ನಾಯಿಕ, ಶಿವಾನಂದ ಹುನ್ನೂರ, ಮಂಜು ಹೋಳಿಕಟ್ಟಿ, ಸುಶೀಲಕುಮಾರ ಪತ್ತಾರ, ಮಿಥೇಶ ಪಟ್ಟಣ, ದತ್ತಾ ವಾಸ್ಟರ್, ಮಲ್ಲು ಹುದ್ದಾರ, ತಿಪ್ಪಣ್ಣ ಭಜಂತ್ರಿ, ರಾಜು ಗುಡೋಡಗಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read More Articles