ಮಕ್ಕಳು ಸ್ಫರ್ಧಾತ್ಮಕ ಜಗತ್ತನ್ನು ಎದುರಿಸಲು ಸನ್ನದ್ದರಾಗಬೇಕು : ಚನ್ನರಾಜ ಹಟ್ಟಿಹೊಳಿ ಕರೆ

ಹಿರೇಬಾಗೇವಾಡಿ : ಮಕ್ಕಳು ಆಧುನಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಫರ್ಧಾತ್ಮಕ ಜಗತ್ತನ್ನು ಎದುರಿಸಲು ಸನ್ನದ್ದರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕರೆ ನೀಡಿದ್ದಾರೆ. 

promotions

ಹಿರೇಬಾಗೇವಾಡಿಯ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ನಿರ್ಮಿಸಿರುವ ನೂತನ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಬುಧವಾರ ಉದ್ಘಾಟಿಸಿ, ಸ್ಮಾರ್ಟ್ ಕ್ಲಾಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಮಕ್ಕಳಿಗೆ ಅಂಗೈಯಲ್ಲೇ ಎಲ್ಲವೂ ಸಿಗುತ್ತಿದೆ. ಅವುಗಳನ್ನು ಶಿಕ್ಷಣಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು, ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

promotions

ಪಠ್ಯ ಮತ್ತು ಪಠ್ಯೇತರ ಎರಡೂ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಳ್ಳಬೇಕು. ಬೆಳೆಯುವ ವಯಸ್ಸಿಗೆ ದೈಹಿಕ ಚಟುವಟಿಕೆ ಕೂಡ ಬಹಳ ಮುಖ್ಯ. ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ಚನ್ನರಾಜ ಹಟ್ಟಿಹೊಳಿ ಕರೆ ನೀಡಿದರು.

ಈ ವೇಳೆ ಎಸ್.ಡಿ.ಎಂ.ಸಿ ಅಧ್ಯಕ್ಷ ಗ‌ಂಗಾಧರ್ ಅಗಸಿಮನಿ, ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸಿಬ್ಬಂದಿ, ಊರಿನ ಗಣ್ಯರು ಉಪಸ್ಥಿತರಿದ್ದರು.

Read More Articles