ಜಿಪಂ ಎದುರು ದಿಢೀರ್ ಪ್ರತಿಭಟನೆ ನಡೆಸಿದ ಗುತ್ತಿಗೆದಾರರು

ಬೆಳಗಾವಿ

ಬೆಳಗಾವಿಯಲ್ಲಿ ಗುತ್ತಿಗೆದಾರರಿಂದ ದಿಡೀರ್ ಪ್ರತಿಭಟನೆ ನಡೆಸಿ ಜಿಪಂ ಎಇಇ ವಿರುದ್ಧ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತಿ ಕಚೇರಿಯ ಮುಂದೆ ದಿಢೀರ್ ಪ್ರತಿಭಟನೆ.

ಬೆಳಗಾವಿಯ 50 ಕ್ಕೂ ಹೆಚ್ಚು ಗುತ್ತಿಗೆದಾರರಿಂದ ಪ್ರತಿಭಟನೆ.

ಅರಳಿಕಟ್ಟಿ ಗ್ರಾಮದಲ್ಲಿ 10 ಲಕ್ಷ ರೂ ಕಾಮಗಾರಿ ಮಾಡಿದ್ದ ಗುತ್ತಿಗೆದಾರು, ಬೆಳಗಾವಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರ ಅಡಿವೆಪ್ಪ ತವಗದ ಅರಳಿಕಟ್ಟಿ ಗ್ರಾಮದಲ್ಲಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರ.

2022 ರಲ್ಲಿ ಕಾಮಗಾರಿ ಪೂರ್ಣಗೊಂಡರೂ ಸಹ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರಿದರು.

ಅನುದಾನ ಬಿಡುಗಡೆಗೆ ಜಿಪಂ ಎಇಇ ಎಂ ಎಸ್ ಬಿರಾದಾರ್ ಪಾಟೀಲ್ ತಕರಾರು ಮಾಡುತ್ತಿದ್ದಾರೆ. ಒಂದು ಸಹಿ ಮಾಡೋಕೆ ತಕರಾರು ಮಾಡಿ ಗುತ್ತಿಗೆದಾರನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸಹಿ ಮಾಡೋಕೆ ಆಗಲ್ಲ ಎನ್ ಮಾಡ್ಕೊತಿಯೋ ಮಾಡ್ಕೊ ಎಂದ ಅಧಿಕಾರಿ. ಅಧಿಕಾರಿಯ ವಿರುದ್ಧ ಸಧ್ಯ ಪ್ರತಿಭಟನೆಗೆ ಇಳಿದಿರುವ ಗುತ್ತಿಗೆದಾರರು. ಎಇಇ ಅಧಿಕಾರಿ ಬಿರಾದಾರ ಅವರನ್ನ ಸಸ್ಪೆಂಡ್ ಮಾಡುವಂತೆ ಒತ್ತಾಯಿಸಿದರು.

Read More Articles