ದೇವದಾಸಿಯರಿಗೆ ಕಾನೂನಿನ ಅರಿವು ಅಗತ್ಯವಿದೆ ! ಡಾ. ನಾಗಲಕ್ಷ್ಮೀ
- shivaraj B
- 20 Aug 2024 , 3:24 PM
- Belagavi
- 179
ಬೆಳಗಾವಿ- ಜಿಲ್ಲೆಯಲ್ಲಿ ಕಳೆದ 2023 ರಿಂದ ಇಲ್ಲಿಯವರೆಗೆ ಒಟ್ಟು 90 ಜನ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ ನಡೆದಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಹೇಳಿದರು.
ಅವರು ಮಂಗಳವಾರ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿ, ನಿರ್ಭಯ ಘಟಕದಲ್ಲಿ ದಾಖಲಾದ ಸಂಖ್ಯೆಗಳು 90 ಇವೆ. ಇನ್ನೂ ಕೆಲ ಪ್ರಕರಣಗಳು ಬೆಳಕಿಗೆ ಬಾರದೆ ಇರಬಹುದು. ಅವುಗಳ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ದೇವದಾಸಿಯರ ಪದ್ಧತಿ ಜೀವಂತ ಇರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ನಾನು ಸವದತ್ತಿಯಲ್ಲಿ ದೇವದಾಸಿಯರನ್ನು ಭೇಟಿಯಾಗಿ ಅವರ ಜೊತೆಗೆ ಚರ್ಚಿಸಿದ್ದೇನೆ. ಅವರಿಗೆ ಕಾನೂನು ಅವರಿವು ಮೂಡಿಸುವ ಅಗತ್ಯ ಇದ್ದು, ಸಂಬಂಧಿಸಿದ ಇಲಾಖೆಯವರಿಗೆ ಸೂಚನೆ ನೀಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದರು.
ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಾ ಆಸ್ಪತ್ರೆ ಶುಚಿಯಾಗಿವೆ. ಸರಕಾರದ ಆರೋಗ್ಯದ ಸೌಲಭ್ಯವನ್ನು ಜನರು ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಅಂಗನವಾಡಿ ಶಾಲೆಗಳಲ್ಲಿ ಶಿಕ್ಷಕಿಯರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡಬೇಕೆಂದು ಸೂಚನೆ ನೀಡಿದ್ದೇನೆ ಎಂದರು.