ಹಾರೂಗೇರಿಗೆ ಸಚಿವ ಸತೀಶ ಜಾರಕಿಹೊಳಿ ಬೇಟಿ ಸಾರ್ವಜನಿಕರ ಕುಂದುಕೊರತೆ ಆಲೋಚನೆ
- shivaraj B
- 12 Sep 2024 , 9:55 AM
- Raibag
- 151
ರಾಯಬಾಗ : ತಾಲೂಕಿನ ಹಾರೂಗೇರಿ ಪುರಸಭೆಗೆ ಲೋಕೋಪಯೋಗಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಬೇಟಿ ನೀಡಿದರು,
ಪುರಸಭೆಯ ನೂತನ ಅದ್ಯಕ್ಷ ವಸಂತ ಲಾಳಿ, ಉಪಾದ್ಯಕ್ಷ ಬಸವರಾಜ ಅರಕೇರಿ ಅವರಿಂದ ಸತ್ಕಾರ ಸ್ವೀಕರಿಸಿ, ಮಾಧ್ಯಮದವರೊಂದಿಗೆ ಸುದ್ದಿಗೋಷ್ಠಿ ನಡೆಸಿದರು.
ಸಚಿವರೊಂದಿಗೆ ಪುರಸಭೆಯ ಸದಸ್ಯರು, ಪಟ್ಟಣ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಚರ್ಚೆ ಮಾಡಲಾಯಿತು.
ಪುರಸಭೆಯ ಆವರಣದಲ್ಲಿ ಕ್ಷೇತ್ರದ ಜನರ ಕುಂದು ಕೊರತೆ ಆಲಿಸಿ ,ಅಹವಾಲಗಳ ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಇವುಗಳನ್ನ ಪರಿಶಿಲಿಸಿ ಬೇಗನೆ ಕೆಲಸ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪೋಲಿಸ್ ಠಾಣೆಯ ಪಕ್ಕದಲ್ಲಿರುವ ಬಸವರಾಜ ಎನ್ನೂವರ ಸಿಂಪಲ್ ಹೋಟೆಲನಲ್ಲಿ ಸಚಿವ ಸತೀಶ ಜಾರಕಿಹೊಳಿ ಮತ್ತು ಮಾಜಿ ಶಾಸಕ ಎಸ್. ಬಿ. ಘಾಟಗೆ , ಸಂಜುಕುಮಾರ ಭಾನೆ ಬಜ್ಜೆ,ಮಂಡಕ್ಕಿ ಚುಡಾ ಸವಿದರು
ರಾಯಬಾಗ ತಹಶಿಲ್ದಾರ ಸುರೇಶ ಮುಂಜೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪಾ ಆರ್, ಪುರಭೆ ಮುಖ್ಯಾಧಿಕಾರಿ, ಪುರಸಭೆಯ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಜಾರಕಿಹೋಳೆ ಅಭಿಮಾನಿಗಳು, ಕ್ಷೇತ್ರದ ಜನರು ಇದ್ದರು.
ವರದಿ : ರಾಹುಲ್ ಮಾದರ