ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮದ್ಯ, ಕಳ್ಳಬಟ್ಟಿ ಮಾರಾಟ ದಂಧೆ: ಕ್ರಮ ಕೈಗೊಳ್ಳದ ಇಲಾಖೆ

ಬೆಳಗಾವಿ: ಬೈಲಹೊಂಗಲ ತಾಲೂಕಿನ ಚಿಕ್ಕ ಬೆಳ್ಳಿಕಟ್ಟಿ ಗ್ರಾಮದಲ್ಲಿ ಅಕ್ರಮ ಮದ್ಯ  ಹಾಗೂ ಕಳ್ಳಬಟ್ಟಿ ಮಾರಾಟ ದಂಧೆ ಜೋರಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಸ್ವಾಸ್ಥ್ಯ ಹಾಳಾಗಿದ್ದು, ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದಲ್ಲಿ ವ್ಯಾಪಕ ಹಾಗೂ ರಾಜಾರೋಷವಾಗಿ ಕ್ರಮವಾಗಿ ಮದ್ಯ ಹಾಗು ಕಳ್ಳಬಟ್ಟಿ  ಮಾರಾಟ ದಂಧೆ ನಡೆಯುತ್ತಿದೆ. ಅಲ್ಲದೆ ಗ್ರಾಮದಲ್ಲಿನ ಉತ್ತಮ ವಾತಾವರಣ ಹಾಳಾಗಿದ್ದು, ಈ ಕುರಿತು ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ  ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

promotions

ಅಲ್ಲದೇ ಗ್ರಾಮದಲ್ಲಿ ಅಕ್ರಮ ಮದ್ಯ ಹಾಗೂ ಕಳ್ಳಬಟ್ಟಿ ಮಾರಾಟ ಮಾಡುತ್ತಿರುವ ಕುರಿತು ಸ್ಥಳೀಯ ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ಇದ್ದರೂ ಯಾವುದೇ ಕ್ರಮಕೈಗೊಳ್ಳದಿರುವುದಕ್ಕೆ ಮಹಿಳೆಯರು ಹಾಗೂ ಮಕ್ಕಳು ಹಿಡಿಶಾಪ ಹಾಕುತ್ತಿದ್ದಾರೆ. 

promotions

 ಗ್ರಾಮದ ಅನೇಕ ಮನೆಗಳಲ್ಲಿ ಚಿಕ್ಕ ಮಕ್ಕಳು ವಿದ್ಯಾರ್ಥಿಗಳು ದುಶ್ಚಚಟಕ್ಕೆ ಬಲಿಯಾಗುತ್ತಿದ್ದಾರೆ ಇದರಿಂದ ಮನೆಯ ಮಕ್ಕಳು ಯುವಕರು ಅಮಲಿನಲ್ಲಿ ಮನೆಗೆ ಬಂದು ಮಹಿಳೆ, ಮಕ್ಕಳ ಹಾಗೂ ವಯೋವೃದ್ಧರ  ಹಲ್ಲೆ ಮಾಡಿರುವ ಹಲವು ನಿದರ್ಶನಗಳಿಗೆ. ಅಲ್ಲದೇ ಈ ಅಕ್ರಮ ದಂಧೆಯಿಂದಾಗಿ ಮನೆಯಲ್ಲಿ ಕುಟುಂಬ ಸದಸ್ಯರ ನಡುವಿನ ಸಂಬಂಧಗಳು ಹಾಳಾಗುತ್ತಿವೆ.

ಜತೆಗೆ ಮಹಿಳೆ ಮಕ್ಕಳು ಕಣ್ಣಿರಲ್ಲಿ ಕೈ ತೋಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಅಕ್ರಮ ದಂಧೆಕೋರರನ್ನು ಹೆಡೆಮುರಿ ಕಟ್ಟಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ

Read More Articles