ಖಾನಾಪುರದ ವಾಲ್ಮೀಕಿ ಸಮುದಾಯದ ಯುವ ಸಂಘಟನೆ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ

 ಬೆಳಗಾವಿ :  ಜಿಲ್ಲೆ ಖಾನಾಪುರ ತಾಲೂಕ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯ ಪದಗ್ರಹಣ ಮತ್ತು ಮುಖ್ಯ ಸಭೆ ರಾಜ್ಯಾಧ್ಯಕ್ಷ ಮಹೇಶ ಶಿಗೀಹಳ್ಳಿ ನೇತೃತ್ವದಲ್ಲಿ ಖಾನಾಪುರ ನಲ್ಲಿ ನಡೆಸಲಾಯಿತು. ಖಾನಾಪುರ ತಾಲೂಕು ಗೌರವ ಅಧ್ಯಕ್ಷ ರಾಜು ನಾಯಕ, ಪ್ರಧಾನ ಕಾರ್ಯದರ್ಶಿ ಹನುಮಂತ ನಾಯಕ, ನಗರ ಅದ್ಯಕ್ಷರರುದ್ರಪ್ಪ ಮುಕಾರಿ, ಉಪಾಧ್ಯಕ್ಷ ಸುನಿಲ್ ಬಾಳನ್ನವರ್ ತಾಲೂಕು ಸಹ ಕಾರ್ಯದರ್ಶಿಯಾಗಿ ಆದಿತ್ಯ ಹುಡೆದಾರ್ ರವರನ್ನು ಆಯ್ಕೆ ಮಾಡಿ ಆದೇಶ ಪತ್ರ ವಿತರಿಸಲಾಯಿತು . 

promotions

ಸಂಘಟನೆಯ ತತ್ವ ಸಿದ್ಧಾಂತಗಳು ನಿಯಮಗಳ ಅಡಿಯಲ್ಲಿ ನಿಸ್ವಾರ್ಥದಿಂದ ನ್ಯಾಯಕ್ಕಾಗಿ ಹೋರಾಟ ಮಾಡಲು ಪದಾಧಿಕಾರಿಗಳು ಸಿದ್ಧರಾಗಬೇಕು ಹಾಗೂ ಕಾನೂನು ಕಾಯ್ದೆಗಳನ್ನು ತಿಳಿದುಕೊಳ್ಳಬೇಕು ಮತ್ತು ಯಾವುದೇ ಸ್ಥಳೀಯ ಸಮಸ್ಯೆಗಳು ಅನ್ಯಾಯಗಳು ಕಂಡಾಗ ಪದಾಧಿಕಾರಿಗಳು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು ಮತ್ತು ಪದಾಧಿಕಾರಿಗಳು ಶಿಸ್ತನ್ನು ಕಾಪಾಡಿಕೊಳ್ಳಬೇಕು ಪ್ರತಿ ಗ್ರಾಮಗಳಲ್ಲಿ ಸಂಘಟನೆ ರಚನೆ ಮಾಡಿ ಮಕ್ಕಳಿಗೆ ಶಿಕ್ಷಣ ಹಾಗೂ ಸಮುದಾಯಕ್ಕೆ ಸಿಗುವ ಸೌಲಭ್ಯಗಳು ಹಾಗೂ ಪ್ರತಿ ಒಂದು ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಲು ಶ್ರಮಿಸಬೇಕು ಎಂದು ಹೇಳಿ ಇನ್ನೂ ಅನೇಕ ವಿಚಾರಗಳನ್ನು ಖಾನಾಪುರ ನೂತನ ಪದಾಧಿಕಾರಿಗಳಿಗೆ ಮತ್ತು ಯುವಕರಿಗೆ ರಾಜ್ಯಾಧ್ಯಕ್ಷ ಮಹೇಶ ಶಿಗಿಹಳ್ಳಿ ತಿಳಿಸಿದರು. 

promotions

ಯುವ ಕರ್ನಾಟಕ ಭೀಮ್ ಸೇನೆ ರಾಜ್ಯಾಧ್ಯಕ್ಷ ಪ್ರವೀಣ್ ಮಾದರ ಮಾತನಾಡಿ, ಸಂಘಟನೆಯ ಮುಖ್ಯ ಅಂಶಗಳನ್ನು ಪದಾಧಿಕಾರಿಗಳಿಗೆ ತಿಳಿಸಿದರು . ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗೌರವ ಅಧ್ಯಕ್ಷರ ರಾಮ್ ಪೂಜಾರಿ, ಉಪಾಧ್ಯಕ್ಷ ಲಗಮಣ್ಣ ಹೋನ್ನಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜು ಸಿತಿಮನಿ, ಜಿಲ್ಲಾ ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ಬಾಗಡಿ, ತಾಲೂಕು ಉಪಾಧ್ಯಕ್ಷ ಶಕ್ತಿಕುಮಾರ ಪಿ. ಎಸ್. ಖಾನಾಪುರ ತಾಲೂಕ ಅಧ್ಯಕ್ಷ, ಆನಂದ್ ಊದಿ, ನಗರ ಸೇವಕ ಹನುಮಂತ ಪೂಜಾರಿ, ಹಾಗೂ ಕುಬೇರ ನಾಯಕ್ ಇದ್ದರು.

Read More Articles