
ಅಖಿಲ ಕರ್ನಾಟಕ ಭೋವಿ ಮತ್ತು ವಡ್ಡರ್ ಸಂಘಟನೆಗಳ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ
ಅಖಿಲ ಕರ್ನಾಟಕ ಭೋವಿ ವಡ್ಡರ್ ಯುವ ವೇದಿಕೆ, ಅಖಿಲ ಕರ್ನಾಟಕ ಭೋವಿ ಕಲ್ಲು, ಮಣ್ಣು ಮತ್ತು ಕಟ್ಟಡ ಕಾರ್ಮಿಕರ ಜಿಲ್ಲಾ ಸಮಿತಿ ಹಾಗೂ ಚಿಕ್ಕೋಡಿ ಜಿಲ್ಲಾ ಬೋವಿ ವಡ್ಡರ್ ಆರಕ್ಷಣೆ ಮತ್ತು ಒಕ್ಕಟ ಸಂಘಟನೆ ವತಿಯಿಂದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.

ಬೆಳಗಾವಿ ಜಿಲ್ಲೆಯ ಕಿತೂರಿನಲ್ಲಿ ವಿಜೃಂಭಣೆಯಿಂದ ನಡೆದಿರುವ ವಿರರಾಣಿ ಕಿತೂರ ಚೆನ್ನಮ್ಮ 200ನೇ ಜಯಂತ್ಯೋತ್ಸವ ಕಾರ್ಯಕ್ರಮದ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ, ಕಿತೂರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಅಭಿನಂದಿಸಿದರು. ಆದರೇ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಿ ಅವರ ಹೆಸರನ್ನು ಕಾರ್ಯಕ್ರಮದಲ್ಲಿ ಒಳಗೊಳ್ಳದಿರುವುದು ಹಾಗೂ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುವುದು ನೋವಿನ ಸಂಗತಿಯೆಂದು ಮನವಿ ಮಾಡಲಾಯಿತು.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮತ್ತು ಕೂಡಲೇ ವಜಾಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಹಾಜರಿದ್ದ ಪ್ರಮುಖರು:
• ಪರಶುರಾಮ ಕಾಳಿ, ಅಧ್ಯಕ್ಷರು
• ಕಾಶಿನಾಥ್ ವಡ್ಡರ್, ಉಪಾಧ್ಯಕ್ಷರು
• ಸುರೇಶ್ ವಡ್ಡರ್, ಪ್ರಧಾನ ಕಾರ್ಯದರ್ಶಿಗಳು
• ಮಾರುತಿ ಗಾಡಿ ವಡ್ಡರ್, ಖಜಾಂಚಿ
• ರಾಜು ವಡ್ಡರ್, ರಾಯಬಾಗ ಅಧ್ಯಕ್ಷರು
• ಮಾರುತಿ ಕೆ. ಗಾಡಿ ವಡ್ಡರ್, ಉಗಾರ ಅಧ್ಯಕ್ಷರು
• ಅರುಣ ವಡ್ಡರ್, ಖಡಕಲಾಟ ಯುವ ಮುಖಂಡರು
ಹಾಗೂ ಚಿಕ್ಕೋಡಿ ಜಿಲ್ಲಾ ಬೋವಿ ವಡ್ಡರ್ ಆರಕ್ಷಣೆ ಮತ್ತು ಒಕ್ಕಟ ಸಂಘಟನೆಯ ಸದಸ್ಯರು ಮತ್ತು ಭೋವಿ ವಡ್ಡರ್ ಸಮಾಜದ ಹಿರಿಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.