
ಕನ್ಯಾಕುಮಾರಿಯ ವಿವೇಕಾನಂದ ರಾಕ್ ಬಳಿ ದಿನ-ರಾತ್ರಿ ಧ್ಯಾನ ಮಾಡಲು ಸಿದ್ಧವಾದ ಪಿಎಂ ಮೋದಿ
- krishna shinde
- 30 May 2024 , 3:33 PM
- Tamilnadu
- 2708
ಕನ್ಯಾಕುಮಾರಿಯ ವಿವೇಕಾನಂದ ರಾಕ್ ಬಳಿ ದಿನ-ರಾತ್ರಿ ಧ್ಯಾನ ಮಾಡಲು ಸಿದ್ಧವಾದ ಪಿಎಂ ಮೋದಿ ಕನ್ಯಾಕುಮಾರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕನ್ನ್ಯಾಕುಮಾರಿಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಮೆಮೊರಿಯಲ್ ಬಳಿ ಧ್ಯಾನ ಮಾಡಲಿದ್ದಾರೆ.

ಮೇ 30ರಂದು ಸಂಜೆ ಆರಂಭಗೊಂಡು, ಜೂನ್ 1ರಂದು ಸಂಜೆವರೆಗೆ ಧ್ಯಾನ ಮಾಡಲಿದ್ದಾರೆ. ಪ್ರಧಾನಮಂತ್ರಿ ಮೋದಿ ಅವರು ಸ್ವಾಮಿ ವಿವೇಕಾನಂದರವರು ಧ್ಯಾನ ಮಾಡಿದ ಧ್ಯಾನ ಮಂದಿರದಲ್ಲಿ, ದಿನ ಮತ್ತು ರಾತ್ರಿ ಧ್ಯಾನ ಮಾಡಲಿದ್ದಾರೆ.

ಈ ಪವಿತ್ರ ಸ್ಥಳದಲ್ಲಿ ಮೋದಿ ಅವರು ಧ್ಯಾನ ಮಾಡುವುದು ವಿಶೇಷ ಅರ್ಥ ಪಡೆದಿದೆ, ಏಕೆಂದರೆ ಸ್ವಾಮಿ ವಿವೇಕಾನಂದ ಅವರು ಈ ಸ್ಥಳದಲ್ಲಿ ಧ್ಯಾನ ಮಾಡಿ ಅತ್ಯಂತ ಮಹತ್ವದ ಅನುಭವ ಪಡೆದಿದ್ದರು.