ಪ್ರಜ್ವಲ್ ರೇವಣ್ಣ ಪ್ರಕರಣ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ದೇವೇಗೌಡರು

ಬೆಂಗಳೂರು: 92 ನೇ ವಸಂತಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹಿಂದಿನ 91 ಹುಟ್ಟುಹಬ್ಬಗಳನ್ನು ಅವರು ಯಾವತ್ತೂ ಇಂಥ ಅಹಿತಕರ ಸನ್ನಿವೇಶದಲ್ಲಿ ಆಚರಿಸಿಕೊಂಡಿರಲಿಕ್ಕಿಲ್ಲ ಎಂದು ಹೇಳಿ ಪ್ರಜ್ವಲ ರೇವಣ್ಣ ಪ್ರಕರಣದಲ್ಲಿ ರೇವಣ್ಣ ಅವರಿಗೆ ಒಂದು ಪ್ರಕರಣಲ್ಲಿ ಜಾಮೀನು ಸಿಕ್ಕಿದೆ ಮತ್ತೊಂದರ ವಿಚಾರಣೆ ನಡೆಯುತ್ತಿದ್ದು ಸೋಮವಾರದಂದು ಕೋರ್ಟ್ ತನ್ನ ತೀರ್ಪು ನೀಡಲಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ತಾವು ಅದರ ಬಗ್ಗೆ ಮಾತಾಡಲ್ಲ ರೇವಣ್ಣರ ವಿರುದ್ಧ ಸುಳ್ಳು ಪ್ರಕರಣಗಳನ್ನು ಸೃಷ್ಟಿಸಲಾಗುತ್ತಿದೆ ಈ ಬಗ್ಗೆ ಕುಮಾರಸ್ವಾಮಿಯವರು ಸ್ಪಷ್ಟವಾದ ಹೇಳಿಕೆಗಳನ್ನು ನೀಡಿದ್ದಾರೆ. ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಇಡೀ ಪ್ರಕರಣದಲ್ಲಿ ಬೇರೆ ಜನ ಸಹ ಶಾಮೀಲಾಗಿದ್ದಾರೆ ಅವರಿಗೂ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತೆಯರಿಗೆ ಪರಿಹಾರ ಸಿಗಬೇಕು ಎಂದು ದೇವೇಗೌಡ ಹೇಳಿದ್ದಾರೆ.

promotions

promotions

Read More Articles