ತಿರುಮಲ ತಿಮ್ಮಪ್ಪನ ಆಶೀರ್ವಾದದೊಂದಿಗೆ ಜನ ಸೇವೆ ಮುಂದೆವರಿಸುವುದಾಗಿ ಹೇಳಿದ ಪ್ರವೀಣ ಹಿರೇಮಠ

ಬೆಳಗಾವಿ : ಗಾಲಿ ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬೆಳಗಾವಿ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರವೀಣ್ ಹಿರೇಮಠ ಪಕ್ಷದ ಮುಖ್ಯಸ್ಥ ಹಾಗು ಸಂಸ್ಥಾಪಕರಾದ ಜನಾರ್ದನ ರೆಡ್ಡಿ ಅವರ ಗಂಗಾವತಿ ಕ್ಷೇತ್ರದ ಗೆಲುವು ಖುಷಿ ತಂದು ಕೊಟ್ಟಿದೆ ಎಂದು ಹೇಳಿದ್ದಾರೆ.

promotions

ತಿಮ್ಮಪ್ಪನ ದರ್ಶನ ಪಡೆದು ಪಕ್ಷದ ಏಳಿಗೆಗಾಗಿ ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುವುದಾಗಿ ತಿಳಿಸಿರುವ ಪ್ರವೀಣ್ ಬೆಳಗಾವಿ ಜಿಲ್ಲೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಹೆಮ್ಮರವಾಗಿ ಬೆಳೆಸಲು ಪಣತೊಟ್ಟಿದ್ದಾರೆ.

promotions

ಈ ಸಲ ನಡೆದಿರುವ ಎಲೆಕ್ಷನಿಂದ ಸಾಕಷ್ಟು ಕಲೆತಿರುವುದಾಗಿ ಪ್ರವೀಣ್ ಹೇಳಿದ್ದಾರೆ,ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕೆ ಆರ್ ಪಿ ಪಕ್ಷದ ಬೇರನ್ನು ಗಟ್ಟಿಗೊಳಿಸುವುದಾಗಿ ಪ್ರವೀಣ್ ಹಿರೇಮಠ ಹೇಳಿದ್ದಾರೆ.

ತಮ್ಮ ಕನಸಾದ್ ಐಟಿ ಬಿಟಿ ಹಾಗು ಅನೇಕ ಕಾರ್ಯಗಳ ಬಗ್ಗೆ ಈಗಲೇ ಪಕ್ಷದ ಹಿರಿಯರೊಂದಿಗೆ ಮಾತನಾಡಿ ಆದಷ್ಟು ಬೇಗ ಬೆಳಗಾವಿ ಯುವ ಜನತೆಗೆ ಸಹಾಯವಾಗುವಂತೆ ಮಾಡುತ್ತೇನೆ ಎಂದು ಪ್ರವೀಣ್ ಹೇಳಿದ್ದಾರೆ.

ಹಾಗೆಯೆ ಮರ್ಚೆಂಟ್ ನೇವಿ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಪ್ರವೀಣ್ ಮರ್ಚೆಂಟ್ ನೇವಿ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಗೈಡ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ಪಕ್ಷದ ಟಿಕೆಟ್ ನೀಡಿದ್ದಕ್ಕಾಗಿ ಧನ್ಯವಾದ 

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬೆಳಗಾವಿ ಉತ್ತರ ಮತ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಟಿಕೆಟ್ ನೀಡಿದ್ದಕ್ಕಾಗಿ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಧನ್ಯವಾದ ತಿಳಿಸಿರುವ ಪ್ರವೀಣ್ ಮುಂದಿನ ದಿನಗಳಲ್ಲಿ ಜನ ಸೇವೆ ಮೂಲಕ ಪಕ್ಷದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.

Read More Articles