ಸಂಕ್ರಾಂತಿ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ, ಮತ್ತು ಮಂತ್ರ ಹಾಗೂ ಆಚರಣೆ.

ಸೂರ್ಯನ ಸಂಕ್ರಮಣವನ್ನು ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯಲಾಗುತ್ತದೆ. ಸಂಕ್ರಾಂತಿ ಪ್ರತಿ ತಿಂಗಳು ಬರುತ್ತದೆ ಏಕೆಂದರೆ ಸೂರ್ಯನ ಸಂಕ್ರಮವು ಪ್ರತಿ ತಿಂಗಳು ನಡೆಯುತ್ತದೆ. ಧನು ರಾಶಿ ಮತ್ತು ಮೀನ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ ಖಾರ್ಮಾಸ ಪ್ರಾರಂಭವಾಗುತ್ತದೆ. ಅದೇ ರೀತಿ, ಸೂರ್ಯ ಮಕರ ರಾಶಿಯಲ್ಲಿ ಸಂಕ್ರಮಿಸಿದಾಗ ಅದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಮಕರ ಸಂಕ್ರಾಂತಿ ಹಿಂದೂಗಳಿಗೆ ಬಹಳ ಮುಖ್ಯವಾದ ಹಬ್ಬವಾಗಿದೆ. ಸಾಮಾನ್ಯವಾಗಿ, ಈ ಹಬ್ಬವನ್ನು ಜನವರಿ 14 ರಂದು ಆಚರಿಸಲಾಗುತ್ತದೆ. ಆದರೆ ಈ ಬಾರಿ, ಮಕರ ಸಂಕ್ರಾಂತಿಯನ್ನು ಉದಯ ತಿಥಿಯಂತೆ ಜನವರಿ 15 ರಂದು ಆಚರಿಸಲಾಗುವುದು. ಈ ದಿನ, ಒಂಬತ್ತು ಗ್ರಹಗಳ ರಾಜ, ಸೂರ್ಯನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. 

promotions

ಮಕರ ಸಂಕ್ರಾಂತಿ 2023 ರ ಸೂರ್ಯ ಪೂಜೆಗೆ ಶುಭ ಮುಹೂರ್ತ, ಮಹತ್ವ, ಪೂಜೆ ವಿಧಿ - ವಿಧಾನಗಳ ಬಗ್ಗೆ ಈ ರೀತಿ ಇರುತ್ತದೆ.ಮಕರ ಸಂಕ್ರಾಂತಿ 2023 ಶುಭಮುಹೂರ್ತ
ಪುಣ್ಯ ಕಾಲ - 2023 ರ ಜನವರಿ 15 ರಂದು ಭಾನುವಾರ, ಬೆಳಿಗ್ಗೆ 7.17 ರಿಂದ ಸಂಜೆ 5.55 ರವರೆಗೆ ಮಹಾ ಪುಣ್ಯ ಕಾಲ - 2023 ರ ಜನವರಿ ಭಾನುವಾರ, 15 ರಂದು ಬೆಳಿಗ್ಗೆ 7.17 ರಿಂದ 9.04 ರವರೆಗೆ ಸುಕರ್ಮ ಯೋಗ - 2023 ರ ಜನವರಿ ಶನಿವಾರ,14 ರಂದು ಮಧ್ಯಾಹ್ನ 12.31 ರಿಂದ ರಾತ್ರಿ 11.48 ರವರೆಗೆ
ಬಾಲವ ಕರಣ - 2023 ರ ಶನಿವಾರ ಜನವರಿ 14 ರಂದು ರಾತ್ರಿ 07:22 ರಿಂದ 09:39 ರವರೆಗೆ. 

promotions

ಮಕರ ಸಂಕ್ರಾಂತಿ ಪೂಜೆ ವಿಧಾನ:
ಮಕರ ಸಂಕ್ರಾಂತಿಯ ದಿನದಂದು ಸ್ನಾನಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ದಿನ ಸೂರ್ಯೋದಯಕ್ಕೆ ಮುನ್ನವೇ ಎದ್ದು ಎಲ್ಲಾ ಕೆಲಸಗಳಿಂದ ನಿವೃತ್ತಿ ಹೊಂದಿದ ಬಳಿಕ, ಸ್ನಾನ ಇತ್ಯಾದಿಗಳನ್ನು ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ. ಗಂಗಾನದಿಯಲ್ಲಿ ಸ್ನಾನ ಮಾಡಿದರೆ ನಿಮಗೂ ಶ್ರೇಯಸ್ಸು. ಆದರೆ ಕಾರಣಾಂತರಗಳಿಂದ ಗಂಗಾಸ್ನಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ ಚಿಂತಿಸುವ ಅಗತ್ಯವಿಲ್ಲ. ನಂತರ ಮನೆಯಲ್ಲಿಯೇ ಸ್ನಾನದ ನೀರಿನಲ್ಲಿ ಸ್ವಲ್ಪ ಗಂಗಾಜಲವನ್ನು ಬೆರೆಸಿ ಆ ನೀರಿನಿಂದ ಕೂಡ ಸ್ನಾನ ಮಾಡಬಹುದು.
ಸ್ನಾನದ ನಂತರ ಸೂರ್ಯದೇವನನ್ನು ಯಥಾವತ್ತಾಗಿ ಪೂಜಿಸಬೇಕು. ಇದಕ್ಕಾಗಿ ತಾಮ್ರದ ಪಾತ್ರೆಯಲ್ಲಿ ನೀರು, ಸ್ವಲ್ಪ ಎಳ್ಳು, ಸಿಂಧೂರ, ಅಕ್ಷತೆ ಮತ್ತು ಕೆಂಪು ಬಣ್ಣದ ಹೂವುಗಳನ್ನು ಹಾಕಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಅದರ ಜೊತೆಗೆ ಸೂರ್ಯ ದೇವನಿಗೆ ಭೋಗವನ್ನು ಅರ್ಪಿಸಿ. ಪೂಜೆಯ ನಂತರ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನವನ್ನು ಮಾಡಬೇಕು. 

promotions

ಸಂಕ್ರಾಂತಿ ಮಹತ್ವ ಮತ್ತು ಇತಿಹಾಸ:
ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿಯು ಧಾರ್ಮಿಕ ಮತ್ತು ಕಾಲೋಚಿತ ಆಚರಣೆಯಾಗಿದೆ ಮತ್ತು ಹಿಂದೂ ಸಮುದಾಯವು ಸೂರ್ಯ ದೇವರು ಎಂದು ನಂಬುವ ಸೂರ್ಯನಿಗೆ ಸಮರ್ಪಿತವಾಗಿದೆ. ಮಕರ ಸಂಕ್ರಾಂತಿಯು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಸೂಚನೆಯಾಗಿದೆ ಮತ್ತು ಹಬ್ಬವನ್ನು ಮುಖ್ಯವಾಗಿ ಭಾರತೀಯ ಉಪಖಂಡದಲ್ಲಿ ಮತ್ತು ಪ್ರಪಂಚದಾದ್ಯಂತದ ಹಿಂದೂಗಳಿಂದ ಆಚರಿಸಲಾಗುತ್ತದೆ.
ಹಿಂದೂ ನಂಬಿಕೆಯ ಪ್ರಕಾರ, ಮಕರ ಸಂಕ್ರಾಂತಿಯಂದು ಒಬ್ಬರು ಸತ್ತರೆ ಅವರು ಮರುಜನ್ಮ ಪಡೆಯುವುದಿಲ್ಲ, ಆದರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ. ಸಂಕ್ರಾಂತಿಯು ಶಂಕರಾಸುರ ಎಂಬ ರಾಕ್ಷಸನನ್ನು ಸಂಹರಿಸಿದ ದೇವತೆ ಎಂದು ನಂಬಲಾಗಿದೆ ಮತ್ತು ಮಕರ ಸಂಕ್ರಾಂತಿಯ ಮರುದಿನ ಕರಿದಿನ್ ಅಥವಾ ಕಿಂಕ್ರಾಂತ್ ಎಂದು ಕರೆಯಲ್ಪಡುವ ದೇವಿಯು ಕಿಂಕರಾಸುರನನ್ನು ಕೊಂದಳು ಎಂದು ನಂಬಲಾಗಿದೆ. 

ಸಂಕ್ರಾಂತಿಯ ವಾಹನ
2023ರಲ್ಲಿ ಸಂಕ್ರಾಂತಿಯ ವಾಹನ ವರಾಹ ಮತ್ತು ಉಪವಾಹನ ವೃಷಭವಾಗಿದೆ. ಈ ವರ್ಷ ಸಂಕ್ರಾಂತಿಯ ಆಗಮನವು ಹಸಿರು ಬಟ್ಟೆ ಮತ್ತು ಹಸಿರು ಬಳೆಗಳು, ಮುತ್ತುಗಳು, ರಂಜಲ್‌ ಅಥವಾ ರಂಜೆ ಹೂವುಗಳು, ಹಣೆಗೆ ಶ್ರೀಗಂಧ, ಒಂದು ಕೈಯಲ್ಲಿ ಖಡ್ಗವೆಂಬ ಆಯುಧವನ್ನು ಇನ್ನೊಂದು ಕೈಯಲ್ಲಿ ತಾಮ್ರದ ಭಿಕ್ಷಾ ಪಾತ್ರೆಯನ್ನು ಹಿಡಿದು ಉತ್ತರಕ್ಕೆ ಸಾಗುತ್ತಾನೆ. 

ಸಂಕ್ರಾಂತಿ 2023 ರ ಫಲಾಫಲ
ಸಂಕ್ರಾಂತಿ ನಂತರ ದೇಶಾದ್ಯಂತ ವ್ಯಾಪಾರ ವರ್ಗದವರಿಗೆ ಲಾಭವಾಗಲಿದೆ. ಇಳುವರಿಯಲ್ಲಿ ಹೆಚ್ಚಳವಾಗಲಿದೆ. ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದವರಿಗೆ ಲಾಭವಾಗಲಿದೆ. ಜಾನುವಾರುಗಳ ನಷ್ಟ ಉಂಟಾಗಲಿದೆ. ಕೃಷಿ ಮತ್ತು ಕೃಷಿ ವರ್ಗಕ್ಕೆ ನಷ್ಟ ಉಂಟಾಗಲಿದೆ. ಜನರು ಮತ್ತು ಪ್ರಜೆಗಳು ಬಳಲುವ ಸಾಧ್ಯತೆಗಳು ಹೆಚ್ಚಾಗಬಹುದು. ಆಹಾರ ಪದಾರ್ಥಗಳು ದುಬಾರಿಯಾಗಲಿವೆ. ಬ್ರಾಹ್ಮಣ ವರ್ಗಕ್ಕೆ ತೊಂದರೆಯಾಗುತ್ತದೆ. 

ಮಕರ ಸಂಕ್ರಾಂತಿ ಸ್ನಾನ, ದಾನ
ಮಕರ ಸಂಕ್ರಾಂತಿಯ ದಿನದಂದು ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ದಿನ ಭಕ್ತರು ಪವಿತ್ರ ನದಿಯಲ್ಲಿ ಕಪ್ಪು ಎಳ್ಳನ್ನು ಹಚ್ಚಿ ಸ್ನಾನವನ್ನು ಮಾಡುತ್ತಾರೆ. ಮಕರ ಸಂಕ್ರಾಂತಿಯ ಶುಭ ಸಮಯದಲ್ಲಿ ಧಾನ್ಯಗಳು, ಎಳ್ಳು, ಬೆಲ್ಲ, ಬಟ್ಟೆ, ಹೊದಿಕೆಗಳು, ಅಕ್ಕಿ, ಎಳ್ಳಿನ ಲಡ್ಡುಗಳು, ಮಂಡಕ್ಕಿ ಲಡ್ಡುಗಳು ಇತ್ಯಾದಿಗಳನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಸೂರ್ಯನ ಜೊತೆಗೆ ಶನಿದೇವನೂ ಪ್ರಸನ್ನನಾಗುತ್ತಾನೆ ಎನ್ನುವ ನಂಬಿಕೆಯಿದೆ. 

                  ಮಕರ ಸಂಕ್ರಾಂತಿ ಮಂತ್ರ
ಓಂ ಹ್ರೀಂ ಹ್ರೀಂ ಸೂರ್ಯಾಯ ನಮಃ
ಓಂ ಹ್ರೀಂ ಘೃಣಿಃ ಸೂರ್ಯ ಆದಿತ್ಯಃ ಕ್ಲೀಂ ಓಂ ನಮಃ
ಓಂ ಘೃಣಿಂ ಸೂರ್ಯ ಆದಿತ್ಯಾಯ ನಮಃ
ಓಂ ಹ್ರೀಂ ಹ್ರೀಂ ಸೂರ್ಯಾಯ ಸಹಸ್ರಕಿರಣಾಯ
ಮನೋವಾಂಚಿತ ಫಲಂ ದೇಹಿ ದೇಹಿ ಸ್ವಾಹಾ 
ಓಂ ಏಹಿ ಸೂರ್ಯ ಸಹಸ್ತ್ರಾಂಶೋಂ ತೇಜೋ ಜಗತ್ಪತೇ
ಅನುಕಂಪಯೇಮಾಂ ಭಕ್ತ್ಯಾ,
ಗೃಹಣಾರ್ಘ್ಯ ದಿವಾಕರಃ

Read More Articles