ಸತೀಶ ಜಾರಕಿಹೊಳಿಗೆ ಸಿಎಂ ಸ್ಥಾನ ಉತ್ತರ ಕರ್ನಾಟಕ ಅಭಿವೃದ್ಧಿಗೆ ಪೂರಕ.ಆಪ್ತ ಶಾಸಕ ವಿಶ್ವಾಸ ವೈದ್ಯ

ಬೆಳಗಾವಿ: ಸಚಿವ ಸತೀಶ ಜಾರಕಿಹೊಳಿಗೆ ಸಿಎಂ ಸ್ಥಾನ ಕೊಟ್ಟರೆ ಒಳ್ಳೆಯದು ಎಂದು ಬೆಳಗಾವಿಯಲ್ಲಿ ಸತೀಶ್ ಜಾರಕೊಹೊಳಿ ಆಪ್ತ ಶಾಸಕ ವಿಶ್ವಾಸ ವೈದ್ಯ ಹೇಳಿದರು.

promotions

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದಿಲ್ಲ. ಮಂತ್ರಿಗಳು, ಶಾಸಕರು ಸಿಎಂ ಪರವಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಖಂಡಿತ ಮುಂದುವರಿಯುತ್ತಾರೆ ಎಂದರು.

promotions

ಸತೀಶ ಜಾರಕಿಹೊಳಿ ಮುಂದಿನ ಸಿಎಂ ಅಭಿಯಾನ ವಿಚಾರಕ್ಕೆ, ಅದೆಲ್ಲಾ ಹೈಕಮಾಂಡಗೆ ಬಿಟ್ಟ ವಿಚಾರವಾಗಿದ್ದು ಸಚಿವ ಸತೀಶ ಜಾರಕಿಹೊಳಿಗೆ ಸಿಎಂ ಸ್ಥಾನ ಕೊಟ್ಟರೆ ಒಳ್ಳೆಯದು. ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತೆ ನಮ್ಮ ಜಿಲ್ಲೆಯವರೆ ಸಿಎಂ ಆದರೆ ಹೆಮ್ಮೆ ಪಡುವ ವಿಷಯ ಎಂದರು. 

ಸತೀಶ ಜಾರಕಿಹೊಳಿ ಸಿಎಂ ಆದರೆ ಒಳ್ಳೆ ವಿಚಾರವಾಗಿದೆ. ಅವರು ಒಳ್ಳೆಯ ಕೆಲಸ ಮಾಡಿದ್ದಾರೆ, ರಾಜ್ಯದಲ್ಲಿ ಅವರದ್ದೇ ಆಗಿರುವ ಸಂಘಟನೆ ಇದೆ. ಸತೀಶ ಜಾರಕಿಹೊಳಿಗೆ ಸಿಎಂ ಆಗೋ ಎಲ್ಲ ಅರ್ಹತೆಗಳು ಇದ್ದು ಬೆಳಗಾವಿ ಜಿಲ್ಲೆಯವರೇ ಸಿಎಂ ಆಗಬೇಕು ಅಂತಾ ಇದೆ ಎಂದು ಸತೀಶ್ ಆಪ್ತ ವಿಶ್ವಾಸ ವೈದ್ಯ ಬ್ಯಾಟಿಂಗ್ ಮಾಡಿದ್ದಾರೆ.

Read More Articles