ಗುರುಪೂರ್ಣಿಮೆಯ ಮಹತ್ವ ಹಾಗೂ ಆಚರಣೆ

ಈ ಬಾರಿ ಗುರು ಪೂರ್ಣಿಮೆ ಜುಲೈ 3ರಂದು ಬಂದಿದ್ದು, ಈ ದಿನ ವಿಶೇಷ ಆಚರಣೆಗಳನ್ನ ಮಾಡಲಾಗುತ್ತದೆ. ಜುಲೈ 2 ರಂದು ಭಾನುವಾರ ರಾತ್ರಿ 8:21 ರಿಂದ ಪೂರ್ಣಿಮೆ ಆಗುತ್ತದೆ, ಆದರೆ ಶುಭ ಸಮಯ ಜುಲೈ 3 ಆಗಿದ್ದು, ಈ ಪೂರ್ಣಿಮೆ ಸೋಮವಾರ ಸಂಜೆ 05:08 ರವರೆಗೆ ಮುಕ್ತಾಯವಾಗುತ್ತದೆ.

Your Image Ad

ಗುರು ಪೂರ್ಣಿಮೆಯು ಭಾರತದಲ್ಲಿ ತನ್ನ ಆಧ್ಯಾತ್ಮಿಕ ಅಥವಾ ಶೈಕ್ಷಣಿಕ ಗುರುಗಳ ಗೌರವಾರ್ಥವಾಗಿ, ಅವರಿಗೆ ನಮನ ಸಲ್ಲಿಸಲು ಮತ್ತು ಅವರಿಗೆ ಗೌರವವನ್ನು ತೋರಿಸಲು ಆಚರಿಸಲಾಗುತ್ತದೆ. ಮಾನವರಾದ ನಮ್ಮೆಲ್ಲರ ಬದುಕನ್ನು ಕಟ್ಟುವಲ್ಲಿ ಗುರುಗಳ ಪಾತ್ರ ಪ್ರಮುಖವಾಗಿದೆ.

Your Image Ad

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಗುರುಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಪುರಾತನ ನಾಗರಿಕತೆಯಾಗಲಿ ಅಥವಾ ಆಧುನಿಕ ಯುಗವೇ ಆಗಿರಲಿ, ಸಮಾಜವನ್ನು ಕಟ್ಟುವಲ್ಲಿ ಗುರುಗಳ ಪಾತ್ರ ಮಹತ್ವದ್ದಾಗಿದೆ. ಸಂತ ಕಬೀರದಾಸರು ತಮ್ಮ ಈ ಪಾತ್ರವನ್ನು ಸರಳ ಮತ್ತು ನಿಗೂಢ ರೂಪದಲ್ಲಿ ತಮ್ಮ ದ್ವಿಪದಿಗಳ ಮೂಲಕ ತೋರಿಸಿದ್ದಾರೆ.

ಸಂತ ಕಬೀರದಾಸರು ಶಿಕ್ಷಕರ ಮಹತ್ವಕ್ಕೆ ಅತ್ಯುತ್ತಮ ಸ್ಥಾನಮಾನ ನೀಡಿದ್ದಾರೆ. ಅವರು ಬರೆದಂತೆ- ಗುರುವಿನ ಕೃಪೆ ಸಿಗದ ತನಕ, ಒಬ್ಬ ವ್ಯಕ್ತಿಯು ಅಜ್ಞಾನದ ಕತ್ತಲೆಯಲ್ಲಿ ಅಲೆದಾಡುತ್ತಾನೆ ಮತ್ತು ಭ್ರಮೆಯ ಬಂಧಗಳಲ್ಲಿ ಬಂಧಿತನಾಗಿರುತ್ತಾನೆ. ಅವನು ಮೋಕ್ಷವನ್ನು ಪಡೆಯುವುದಿಲ್ಲ. ಗುರುವಿಲ್ಲದಿದ್ದರೆ, ಅವನಿಗೆ ಸತ್ಯ ಮತ್ತು ಅಸತ್ಯದ ನಡುವಿನ ವ್ಯತ್ಯಾಸವು ತಿಳಿದಿಲ್ಲ, ಸರಿ ಮತ್ತು ತಪ್ಪುಗಳ ಜ್ಞಾನವಿರುವುದಿಲ್ಲ.

ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಗುರು ಪೂರ್ಣಿಮಾ ಹಬ್ಬವನ್ನು ಆಚರಿಸಲಾಗುತ್ತದೆ.

ಇನ್ನು ಯಾವಾಗಲೂ ಈ ಗುರು ಪೂರ್ಣಿಮೆ ದಿನ ವಿಶೇಷ ಯೋಗ ರೂಪುಗೊಳುತ್ತದೆ. ಕಳೆದ ಬಾರಿ ಶಶ, ಹಂಸ, ಭದ್ರ ಮತ್ತು ರುಚಕ್ ರಾಜಯೋಗಗಳು ರೂಪುಗೊಂಡಿದ್ದವು. ಈ ಬಾರಿ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತಿದ್ದು, ಬಹಳ ವಿಶೇಷವಾಗಿದೆ.

ಗುರು ಪೂರ್ಣಿಮೆಯು ಭಾರತದಲ್ಲಿ ತನ್ನ ಆಧ್ಯಾತ್ಮಿಕ ಅಥವಾ ಶೈಕ್ಷಣಿಕ ಗುರುಗಳ ಗೌರವಾರ್ಥವಾಗಿ, ಅವರಿಗೆ ನಮನ ಸಲ್ಲಿಸಲು ಮತ್ತು ಅವರಿಗೆ ಗೌರವವನ್ನು ತೋರಿಸಲು ಆಚರಿಸಲಾಗುತ್ತದೆ. ಮಾನವರಾದ ನಮ್ಮೆಲ್ಲರ ಬದುಕನ್ನು ಕಟ್ಟುವಲ್ಲಿ ಗುರುಗಳ ಪಾತ್ರ ಪ್ರಮುಖವಾಗಿದೆ.

ಗುರು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತಂದೆ-ತಾಯಿಯ ನಂತರ ನಮ್ಮನ್ನ ತಿದ್ದಿ ಪಾಠ ಹೇಳುವವರು ಅವರೇ. ಹಾಗಾಗಿ ನಮ್ಮಲ್ಲಿ ಗುರುವಿಗೆ ಮಹತ್ವದ ಸ್ಥಾನ ನೀಡಲಾಗುತ್ತದೆ. ಅದರಲ್ಲೂ ಭಾರತ ಗುರು ಪರಂಪರೆಯ ದೇಶ ಹಾಗಾಗಿ ಗುರುವಿಗೆ ತುಸು ಹೆಚ್ಚೇ ಮಹತ್ವ ನೀಡಲಾಗುತ್ತದೆ.

ನಾವು ಗುರುವಿಗೆ ಧನ್ಯವಾದ ತಿಳಿಸಲು ಹಾಗೂ ಅವರನ್ನ ಪೂಜಿಸಲೆಂದೇ ಒಂದು ದಿನವನ್ನ ಮೀಸಲಿಟ್ಟಿದ್ದು, ಅದನ್ನ ಗುರು ಪೂರ್ಣಿಮೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಆಷಾಢ ಮಾಸದ ಹುಣ್ಣಿಮೆಯ ದಿನದಂದು ಇದನ್ನ ಆಚರಿಸಲಾಗುತ್ತದೆ.

ಮಹಾಭಾರತ ಮಹಾಕಾವ್ಯವನ್ನು ರಚಿಸಿದವರು ವೇದವ್ಯಾಸರು ಸಹ ಇದೇ ದಿನ ಜನಿಸಿದ ಕಾರಣ ಇದಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಗುರು ಪೂರ್ಣಿಮೆಯ ದಿನದಂದು ಮಹರ್ಷಿ ವೇದ ವ್ಯಾಸರು ಎಲ್ಲಾ ನಾಲ್ಕು ವೇದಗಳನ್ನು ರಚಿಸಿದರು ಮತ್ತು ಈ ಕಾರಣಕ್ಕಾಗಿ ಅವರಿಗೆ ವೇದ ವ್ಯಾಸ ಎಂದು ಹೆಸರಿಸಲಾಯಿತು ಎಂದು ಗ್ರಂಥಗಳಲ್ಲಿ ಹೇಳಲಾಗಿದೆ. ಇನ್ನು ಈ ದಿನ ವಿಶೇಷ ಪರಿಹಾರಗಳನ್ನ ಮಾಡಿದ್ರೆ ಗುರು ದೋಷಕ್ಕೆ ಮುಕ್ತಿ ಸಿಗುತ್ತದೆ.

Read More Articles