ಕಣಬರಗಿಯಲ್ಲಿ ವೀರ ಸಿಂಧೂರ ಲಕ್ಷ್ಮಣ ಜಯಂತಿ ಆಚರಣೆ

ಕಣಬರಗಿ: ಕಣಬರಗಿಯಲ್ಲಿ ವೀರ ಸಿಂಧೂರ ಲಕ್ಷ್ಮಣ ಅಭಿಮಾನಿ ಬಳಗದಿಂದ ವೀರ ಸಿಂಧೂರ ಲಕ್ಷ್ಮಣ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

promotions

ಊರಿನ ಮುಖಂಡರು ಹಾಗೂ ಯುವಕರು ಒಗ್ಗಟ್ಟಿನಿಂದ ಸಿಂಧೂರ ಲಕ್ಷ್ಮಣ ಫೋಟೊ ಹಾಗೂ ನಾಮಪಲಕಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚುವ ಮೂಲಕ ಈ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು.

promotions

ಈ ಕಾರ್ಯಕ್ರಮದಲ್ಲಿ ಮಂಜುನಾಥ ಚಿಕ್ಕಲ್ಲದಿನ್ನಿ, ರಾಜು ಮೀಶಿ, ಸಿದ್ರಾಯಿ ನಾಯ್ಕ, ಸಾಮಾಜಿಕ ಹೋರಾಟಗಾರ ಮಹೇಶ ಎಸ್ ಶಿಗೀಹಳ್ಳಿ, ಪ್ರಶಾಂತ ಬಂಡಿಹೋಳಿ, ರೇನೆಶ, ಜಗದೀಶ್, ಪುಷ್ಪಕ ಕುರುಬರ, ಅಪ್ಪಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

promotions

Read More Articles