ರಕ್ತದಾನ ಶ್ರೇಷ್ಠವಾದ ದಾನ ಸುನೀಲ ಮರಕುಂಬಿ
- shivaraj bandigi
- 14 Jan 2024 , 11:42 AM
- Belagavi
- 371
ಬೈಲಹೊಂಗಲ : ಅನ್ನದಾನ, ವಸ್ತ್ರದಾನ ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದದ್ದು ಎಂದು ಮಾ ಭಾರತಿ ಸೇವಾ ಫೌಂಡೇಶನ್ ಅಧ್ಯಕ್ಷ ಸುನೀಲ ಮರಕುಂಬಿ ಹೇಳಿದರು.

ಅವರು ತಾಲೂಕಿನ ಆನಿಗೋಳ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಾಜಿ ಪ್ರಧಾನಿ, ಅಟಲ ಬಿಹಾರಿ ವಾಜಪೇಯಿಯವರ ಜನ್ಮದಿನದ ನಿಮಿತ್ಯ, ವಾಜಪೇಯಿ ಅಭಿಮಾನಿ ಬಳಗ, ಮಾ ಭಾರತಿ ಸೇವಾ ಫೌಂಡೇಶನ್ ಆಶ್ರಯದಲ್ಲಿ ಉಚಿತ ನೇತ್ರ ತಪಾಸನಾ, ರಕ್ತದಾನ. ಚಿಕ್ಕಮಕ್ಕಳ ಮತ್ತು ಎಲುವು ಕೀಲು ತಪಾಸನಾ ಶಿಬಿರದಲ್ಲಿ ಮಾತನಾಡಿದರು.

ಪ್ರತಿವರ್ಷ ಅಟಲ ಬಿಹಾರಿ ವಾಜಪೇಯಿಯವರ ಜನ್ಮದಿನದ ಪ್ರಯುಕ್ತ ರಕ್ತದಾನ ಮುಂತಾದ ಶಿಬಿರಗಳನ್ನು ಆಯೋಜಿಸಿ ರಕ್ತದ ಅವಶ್ಯಕತೆವಿರುವ ಜನರಿಗೆ ರಕ್ರವನ್ನು ದೊರಕಿಸಿ ಕೊಡುವದು ಮತ್ತು ಉಚಿತ ತಪಾಸನಾ ಶಿಬಿರಗಳನ್ನು ನಡೆಸಿ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಸೇವಾ ಸಂಸ್ಥೆ ಕಾರ್ಯನಿರತವಾಗಿದೆ ಎಂದರು.
ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿ, ಮಾ ಭಾರತಿ ಸೇವಾ ಸಂಸ್ಥೆ ಸಾರ್ವಜನಿಕರ ಸೇವೆಗೆ ಯಾವಾಗಲೂ ಸಿದ್ದವಿದ್ದು, ರಕ್ತದಾನ ಶಿಬಿರದಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ರಕ್ತದಾನ ಮಾಡುತ್ತಿದ್ದಾರೆ ಎಂದರು.
ಹುಬ್ಬಳ್ಳಿಯ ಡಾ.ಎಂ.ಎಂ.ಜೋಶಿ ಆಸ್ಪತ್ರೆಯ ವತಿಯಿಂದ ನೇತ್ರ ತಪಾಸನೆ ಡಾ.ಶರಣ ಅಂಗಡಿ ಹಾಗೂ ಡಾ. ಮಂಜುನಾಥ ಮುದಕನಗೌಡರ ಅವರ ವತಿಯಿಂದ ಚಿಕ್ಕಮಕ್ಕಳ ಹಾಗೂ ಎಲುವು ಕೀಲು ತಪಾಸನೆ ನಡೆಸಲಾಯಿತು.
ವಾಜಪೇಯಿ ಅಭಿಮಾನಿ ಬಳಗ, ಸೇವಾ ಸಂಸ್ಥೆಯ ಪದಾಧಿಕಾರಿಗಳು ಆನಿಗೋಳ, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಇದ್ದರು.
ವರದಿ : ರವಿಕಿರಣ್ ಯಾತಗೇರಿ










