
ಬೈಲಹೊಂಗಲ ಜಿಲ್ಲಾ ಹೋರಾಟ! ಆಡಳಿತಾತ್ಮಕ ನ್ಯಾಯದ ಬೇಡಿಕೆ
ಬೈಲಹೊಂಗಲ- ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿರುವ ಒಂದು ಪ್ರಮುಖ ಮತ್ತು ಐತಿಹಾಸಿಕ ತಾಲೂಕು ಕೇಂದ್ರವಾಗಿದ್ದು,ಈ ಪ್ರದೇಶ ತನ್ನದೇ ಆದ ವೈಶಿಷ್ಟವಾದ ಭೌಗೋಳಿಕ ಮಹತ್ವ,ಐತಿಹಾಸಿಕ ವಾಗಿ ಮಹತ್ವ ಪಡೆದುಕೊಂಡಿದೆ. ದಶಕಗಳಿಂದಲೂ, ಕಳೆದ 30 ವರ್ಷಗಳಿಂದ ಐತಿಹಾಸಿಕ ಬೈಲಹೊಂಗಲ ತಾಲೂಕಾ ಕೇಂದ್ರವನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕೆಂಬ, ಪ್ರಬಲವಾದ ಬೇಡಿಕೆಯು ಸ್ಥಳೀಯ ಜನರಿಂದ ವ್ಯಕ್ತವಾಗುತ್ತಾ ಬಂದಿದೆ.

ರಾಜ್ಯದಲ್ಲಿ ಆಡಳಿತವನ್ನು ಮತ್ತಷ್ಟು ವಿಕೇಂದ್ರೀಕರಿಸಲು, ಪ್ರಾದೇಶಿಕ ಅಸಮತೋಲತ ಅಭಿವೃದ್ಧಿಯನ್ನು ಸಾಧಿಸಲು ಬೈಲಹೊಂಗಲವನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷತಾಲೂಕು ಗಾಳಿಗೆ ಈ ಭಾಗದ ಜನರ ದೀರ್ಘಕಾಲದ ಬೇಡಿಕೆಯಾಗಿದೆ.

ಹೋರಾಟದ ಹಿನ್ನೆಲೆ ಮತ್ತು ಬೇಡಿಕೆಯ ಕಾರಣಗಳು ಬೈಲಹೊಂಗಲ ಯಾಕೆ ಜಿಲ್ಲೆಯಾಗಬೇಕು ಎನ್ನುವುದಕ್ಕೆ ಹಲವಾರು ಆಡಳಿತಾತ್ಮಕ ಕಾರಣಗಳಿವೆ:
ಕೃಷಿ ಇಲ್ಲಿನ ಪ್ರಮುಖ ಚಟುವಟಿಕೆಯಾಗಿದ್ದು,ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಮಾರುಕಟ್ಟೆಗಳ ಅಭಿವೃದ್ಧಿಗೆ ಉತ್ತೇಜನ ನೀಡಲು ಸಹಕಾರಿಯಾಗುತ್ತದೆ.
ಬೈಲಹೊಂಗಲ ತಾಲೂಕಾ ಕೇಂದ್ರವು ಉತ್ತಮವಾದ ರಸ್ತೆ, ಹಾಗೂ ಶೈಕ್ಷಣಿಕವಾಗಿ ಬೆಳೆಯುತ್ತಿದೆ.
ಜಿಲ್ಲಾ ಕೇಂದ್ರವಾದರೆ, ಸರ್ಕಾರಿ, ಅರೇ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಹೆಚ್ಚಿನ ಅನುದಾನ ಲಭ್ಯವಾಗಿ ಮೂಲಸೌಕರ್ಯಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಲಗೊಳ್ಳುತ್ತವೆ..
ಇದರಿಂದ ಸರ್ಕಾರಕ್ಕೆ ಯಾವುದೇ ತರಹದ ದೊಡ್ಡ ಆರ್ಥಿಕ ಹೊರೆ ಏನೂ ಆಗುವುದಿಲ್ಲ, ಬದಲಿಗೆ ಜನರಿಗೆ ನೇರವಾಗಿ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಸಹಕಾರಿಯಾಗುತ್ತದೆ.
ಐತಿಹಾಸಿಕ ಹಿನ್ನಲೆಯುಳ್ಳ ಬೈಲಹೊಂಗಲ ನಗರವು ವೀರರಾಣಿ ಕಿತ್ತೂರು ಚೆನ್ನಮ್ಮ ಸಮಾಧಿ, ಬೆಳವಡಿ ಮಲ್ಲಮ್ಮ, ಅಮಟೂರ ಬಾಳಪ್ಪ ಮತ್ತು ಸಂಗೊಳ್ಳಿ ರಾಯಣ್ಣನವರ ಕರ್ಮ ಭೂಮಿಯಾಗಿದ್ದು ರಾಯಣ್ಣ ರಾಕ್ ಗಾರ್ಡನ್ ಕೂಡಾ ನಾಡಿಗೆ ಹತ್ತಿರದಲ್ಲಿದೆ.
ದಿನ ಬೆಳದಂತೆ ಬೈಲಹೊಂಗಲ ನಾಡು ಕೂಡ, ಬೃಹತ್ ಜನಸಂಖ್ಯೆ ಜೊತೆಗೆ ಕೃಷಿಯಲ್ಲಿಯೂ ಪ್ರಗತಿ ಸಾಧಿಸುತ್ತಿದ್ದು, ಜಿಲ್ಲೆಯ ದೊಡ್ಡ ಉಪವಿಭಾಗ ಕೇಂದ್ರವನ್ನು ಜಿಲ್ಲೆಯನ್ನಾಗಿ ಪರಿವರ್ತಿಸುವುದರಿಂದ ಅಲ್ಲಿನ ನಾಗರಿಕರಿಗೆ ಮೂಲಭೂತ ಸೌಕರ್ಯಗಳು ಮತ್ತು ಸರ್ಕಾರಿ ಸೇವೆಗಳನ್ನು ಉತ್ತಮವಾಗಿ ಒದಗಿಸಲು ಸಾಧ್ಯವಾಗುತ್ತದೆ.
ಬೈಲಹೊಂಗಲ ಜಿಲ್ಲಾ ಕೇಂದ್ರದಲ್ಲಿ ಯರಗಟ್ಟಿ, ಸವದತ್ತಿ, ಕಿತ್ತೂರು, ರಾಮದುರ್ಗ ಮತ್ತು ಗೋಕಾಕ ನಂತಹ ತಾಲೂಕುಗಳ ಜನರಿಗೆ ಆಡಳಿತ ಸುಲಭವಾಗಿ ತಲುಪಲು ತಾಲೂಕು ಮಗಳಿಗೆ. ಸರ್ಕಾರದ ಯೋಜನೆಗಳು, ಸೇವೆಗಳ ವಿತರಣೆ ಹೆಚ್ಚು ಪರಿಣಾಮಕಾರಿಯಾಗುವ ಸಂಭವ ಇರುತ್ತದೆ.
ಬೈಲಹೊಂಗಲ ಜಿಲ್ಲಾ ಹೋರಾಟವು ವಿವಿಧ ಹಂತಗಳಲ್ಲಿ ನಡೆಯುತ್ತಿದ್ದು, ಹೋರಾಟದ ನೇತೃತವನ್ನು ಸ್ಥಳೀಯ ಸಂಘಟನೆಗಳು, ಕನ್ನಡ ಪರ ಹೋರಾಟಗಾರರು, ಯುವಕರು ಮತ್ತು ರೈತರು ಮತ್ತು ಕಾರ್ಮಿಕ ಸಮುದಾಯಗಳು ಮುನ್ನಡೆಸುತ್ತಿವೆ.
ಕಳೆದ ಜಿಲ್ಲಾ ಕೇಂದ್ರದ ಘೋಣಣೆಗಾಗಿ ನಿರಂತರ ಹೋರಸಟ ನಡೆಯುತ್ತಿದ್ದು, ತಾಲೂಕಾ ಕೇಂದ್ರವನ್ನು ಬಂದ್, ರಸ್ತೆ ತಡೆ ಮಾಡಿ ಉಪ ವಿಭಾಗ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹಗಳನ್ನು ಕೂಡಾ ಮಾಡಲಾಗಿದೆ.
ಈ ಕುರಿತು ಮುಖ್ಯಮಂತ್ರಿಗಳು, ಸಂಬಂಧಪಟ್ಟ ಇಲಾಖಾ ಸಚಿವರು ಮತ್ತು ಶಾಸಕರಿಗೆ ಜಿಲ್ಲಾ ಸ್ಥಾನಮಾನದ ಬೇಡಿಕೆಯ ಕುರಿತು ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ.
ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಗಮನ ಕೊಡಬೇಕಾದ ಅವಶ್ಯಕತೆ ಇದೆ.
ಹೊಸ ತಾಲೂಕುಗಳ ಸಂಘಟನೆ: ಬೈಲಹೊಂಗಲ ಜಿಲ್ಲೆ ರಚನೆಯಾದರೆ, ಯರಗಟ್ಟಿ, ಸವದತ್ತಿ, ಕಿತ್ತೂರು, ಗೋಕಾಕ ಮತ್ತು ರಾಮದುರ್ಗದಂತಹ ನೆರೆಯ ತಾಲೂಕುಗಳಿಗೆ ಸಹಕಾ್ಲಿದೆ ವಯಾಗಿದೆ. ಸರ
ಶಿವಾನಂದ ಕೋಲಕಾರ ಕಿತ್ತೂರು ಕರ್ನಾಟಕ ಸೇನೆ ಬೆಳಗಾವಿ ಜಿಲ್ಲಾಧ್ಯಕ್ಷರು ಮಾತನಾಡಿ, ಬೆಳಗಾವಿ ಜಿಲ್ಲೆ ವಿಭಜನೆ ಹೋರಾಟ ದಶಕಗಳಿಂದ ನಡೆಯುತ್ತಿದೆ, ನಮ್ಮ ಪ್ರಥಮ ಆದ್ಯತೆ ಚಿಕ್ಕೋಡಿ ಹಾಗೂ ಬೈಲಹೊಂಗಲ ಜಿಲ್ಲೆಯನ್ನು ಮಾಡಬೇಕು ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗಕ್ಕೆ ಅನ್ಯಾಯ ಮಾಡಲಾಗಿದೆ. ಈಗಲೂ ಕಾಲ ಮಿಂಚಿಲ್ಲ. ಬೆಳಗಾವಿ ಜಿಲ್ಲೆ ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ, ಆದರೆ ಅಭಿವೃದ್ಧಿ, ಆಡಳಿತ ದೃಷ್ಟಿಯಿಂದ ವಿಭಜನೆ ಅತ್ಯಂತ ಸೂಕ್ತವಾದ ತೀರ್ಮಾನ, ಈ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ ವಿಂಗಡನೆಗೆ ಸರ್ಕಾರ ಅಂಕಿತ ಹಾಕಬಹುದು ಎಂಬ ಅನುಮಾನ ನಮಗೆ ಮೂಡುತಿದೆ, ಅದಕ್ಕೆ ಅರ್ಹತೆ ಪಟ್ಟಿಯಲ್ಲಿ ಬೈಲಹೊಂಗಲ, ಚಿಕ್ಕೋಡಿ ಬೆಳಗಾವಿ ಜಿಲ್ಲೆ ವಿಭಜನೆಗೆ ಕೂಗು ವ್ಯಾಪಕವಾಗಿ ಹಬ್ಬಿದ್ದು ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಜಿಲ್ಲೆಯ ಶಾಸಕರು ಸದನದಲ್ಲಿ ದ್ವನಿ ಎತ್ತಲೆಂದು ಇಲ್ಲಿನ ಜನರು ಹಾಗೂ ಕಿತ್ತೂರು ಕರ್ನಾಟಕ ಸೇನೆ ಆಗ್ರಹಿಸಿದ್ದಾರೆ. ದಶಕಗಳ ಹಿಂದೆ ಬೈಲಹೊಂಗಲ ಹಾಗೂ ಚಿಕ್ಕೋಡಿ ನೂತನ ಜಿಲ್ಲೆ ರಚನೆಗೆ ಎಲ್ಲಾ ಅರ್ಹತೆ ಪಡೆದಿವೆ. ಸರ್ಕಾರ ಈ ಎರಡು ನಗರಗಳನ್ನು ನೂತನ ಜಿಲ್ಲೆ ಘೋಷಣೆಗಾಗಿ ತಯಾರಿ ಮಾಡಿಕೊಂಡಿದ್ದು ಕೆಲವು ರಾಜಕೀಯ ನಾಯಕರು ತಮ್ಮ ಕ್ಷೇತ್ರಗಳನ್ನು ನೂತನ ಜಿಲ್ಲೆಗೆ ಒತ್ತಾಯಿಸಿರುವ ಹಿನ್ನೆಲೆ ಸರ್ಕಾರ ಜಿಲ್ಲಾ ರಚನೆ ಕಾರ್ಯವನ್ನು ಸ್ಥಗಿತಗೊಳಿಸಿದೆ ಎಂಬ ಮಾತುಗಳು ನಮಗೆ ಕೇಳಿ ಬರುತ್ತಿವೆ.
ಆಡಳಿತದ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಅನಿವಾರ್ಯವಾಗಿದೆ. ಸರ್ಕಾರದ ಅನುದಾನ ಕೊರತೆಯಿಂದ ಬೆಳಗಾವಿ ಜಿಲ್ಲೆ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ನೀರಾವರಿ ಯೋಜನೆಗಳು ಅರ್ಧಕ್ಕೆ ನಿಂತು ರೈತರ ಕನಸು ಕಮರಿದೆ. ಅದಷ್ಟು ಬೇಗ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗಡಿ ಜಿಲ್ಲೆ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಕೈಗೆತ್ತಿಕೊಳ್ಳಬೇಕೆನ್ನುವುದು ಬೆಳಗಾವಿ ಜಿಲ್ಲೆಯ ಹಾಗೂ ಬೈಲಹೊಂಗಲ ತಾಲ್ಲೂಕಿನ ಎಲ್ಲ ಜನರ ಹಾಗೂ ಕಿತ್ತೂರು ಕರ್ನಾಟಕ ಸೇನೆ ಎಲ್ಲ ಕನ್ನಡ ಪರ ಸಂಘಟನೆಗಳ ಒತ್ತಾಸೆಯಾಗಿದೆ.
ಶಿವಾನಂದ ಕೋಲಕಾರ ಕಿತ್ತೂರು ಕರ್ನಾಟಕ ಸೇನೆ ಬೆಳಗಾವಿ ಜಿಲ್ಲಾಧ್ಯಕ್ಷರು
ವರದಿಗಾರ: ರವಿಕಿರಣ್ ಯಾತಗೇರಿ










