ಬೆಳಗಾವಿಯಲ್ಲಿ ಮೂರು ವರ್ಷದ ಮಗುವಿನ ನಿರ್ದಯ ಹತ್ಯೆ,ಬೆಚ್ಚಿಬಿದ್ದ ಜನತೆ!
- shivaraj bandigi
- 20 May 2024 , 5:26 PM
- Belagavi
- 718
ಬೆಳಗಾವಿ: ಕಂಗ್ರಾಳಿ ಕೆ ಹೆಚ್ ಗ್ರಾಮದಲ್ಲಿ ದಾರುಣ ಘಟನೆ ನಡೆದಿದ್ದು, ಮೂರು ವರ್ಷದ ಸಮೃದ್ದಿ ಎಂಬ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹೆಚ್ಚಿನ ಮಾಹಿತಿಗಳ ಪ್ರಕಾರ, ರಾಯಣ್ಣ ನಾವಿಯ ಮೊದಲ ಪತ್ನಿ ಶೋಭಾ ನಿಧನದ ನಂತರ, ಸಪ್ನಾ ಜೊತೆಗೆ ಮದುವೆಯಾದನು. ಶೋಭಾ ಹತ್ಯೆಯಾದ ಘಟನೆ 2021ರಲ್ಲಿ ಮಹಾರಾಷ್ಟ್ರದ ನಾಗಪುರದ ಕಾರದಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶೋಭಾ ಹತ್ಯೆ ಪ್ರಕರಣದಲ್ಲಿ ರಾಯಣ್ಣ ನಾವಿ, ಆತನ ತಾಯಿ ಮತ್ತು ತಂಗಿ ರೂಪಾ ಆರೋಪಿತರಾಗಿದ್ದರು.
ಈ ಘಟನೆ ಶೋಭಾ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ಇತ್ತೀಚಿನ ಆರೋಪಗಳನ್ನು ಮತ್ತಷ್ಟು ಗಂಭೀರವಾಗಿಸುತ್ತಿದೆ. ಬಾಲಕಿ ಸಮೃದ್ದಿ ಮೇಲೆ ಹತ್ಯೆ ಆರೋಪದ ಬಳಿಕ, ಸಪ್ನಾ ಮತ್ತು ರಾಯಣ್ಣ ಮೇಲೆ ಅನುಮಾನಗಳು ಮತ್ತಷ್ಟು ಹೆಚ್ಚಿವೆ. ಇನ್ನು, ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳೀಯರಿಂದ ಮಾಹಿತಿಯನ್ನು ಕಲೆಹಾಕಿ ತನಿಖೆಯನ್ನು ಮುಂದುವರಿಸುತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ವರದಿಯ ಪ್ರಕಾರ, ಬಾಲಕಿಯ ಹತ್ಯೆಯ ಬಗ್ಗೆ ಸೂಕ್ತ ಮಾಹಿತಿ ಹೊರಬೀಳಬೇಕಿದ್ದು, ಗ್ರಾಮದಲ್ಲಿ ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ, ಮತ್ತು ಗ್ರಾಮಸ್ಥರು ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.