
ಕ್ರೂಸರ್ ವಾಹನ ಪಲ್ಟಿ ಮೂವರು ಮಹಿಳೆಯರ ಸಾವು
- shivaraj bandigi
- 11 May 2024 , 9:16 AM
- Belagavi
- 859
ಅಥಣಿ : ಕ್ರೂಸರ್ ವಾಹನವೊಂದು ಪಲ್ಟಿಯಾಗಿ ಸ್ಥಳದಲ್ಲಿಯೇ ಮೂವರು ಮಹಿಳೆಯರು ಸಾವನ್ನಪ್ಪಿದ ಘಟನೆ

ಮಹಾರಾಷ್ಟ್ರದ ಸಾಂಗೋಲಾ- ಜತ್ತ ಮಾರ್ಗದ ಬಳಿ ನಡೆದಿದೆ.

ಮೃತರನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಟಮದ ನಿವಾಸಿಗಳಾದ ಮಹಾದೇವಿ ಚೌಗಲಾ, ಗೀತಾ ದೊಡಮನಿ, ಕಸ್ತೂರಿ ಎಂದು ಗುರುತಿಸಲಾಗಿದ್ದು, ಮೃತ ದುರ್ದೈವಿಗಳ
ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕೆಎ 24 ಎಮ್ 1121 ನಂಬರಿನ ಕ್ರೂಸರ್ ವಾಹನ ಪಲ್ಟಿಯಾಗಿ ಈ ಘಟನೆ ನಡೆದಿದೆ.
ಕೆಲಸಕ್ಕೆ ಹೋಗೂವ ಸಂದರ್ಭದಲ್ಲಿ ಕ್ರೂಸರ ವಾಹನದ ಎಡಬದಿಯ ಟೈರ್ ಬ್ಲ್ಯಾಸ್ಟ್. ಆಗಿದ್ದು ಪರಿಣಾಮ ವಾಹನ ಪಲ್ಟಿಯಾಗಿದೆ.
ಕ್ರೂಸರ್ ಪಲ್ಟಿಯಾದ ಪರಿಣಾಮ ಮೂವರು ಮೃತಪಟ್ಟು ಹಲವರಿಗೆ ಗಂಭೀರ ಗಾಯಗಳಾಗಿವೆ
ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಳ್ಳಿಗೇರಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವರದಿ : ರಾಹುಲ್ ಮಾದರ